ಮನರಂಜನೆ

ಸಲ್ಮಾನ್ ಖಾನ್ ಬಿಗ್ ಬಾಸ್ ಎಪಿಸೋಡ್ ಒಂದಕ್ಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ..?

ದೇಶ(ಮುಂಬೈ)ಸೆ.25:- ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನ ಇತ್ತೀಚಿಗಿನ ಚಿತ್ರ ಟ್ಯೂಬ್ ಲೈಟ್ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಲಿಲ್ಲ. ಆದರೂ ಕೂಡ ಸಲ್ಮಾನ್ ಪಾಪ್ಯುಲಾರಿಟಿಗೇನೂ ಕಡಿಮೆ ಆಗಿಲ್ಲ. ಸಲ್ಮಾನ್ ಬಿಗ್ ಬಾಸ್ ಎಪಿಸೋಡ್ ಒಂದಕ್ಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ..?

ಸಲ್ಮಾನ್ ಖಾನ್ ಮತ್ತೆ ಕಿರುತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅವರು ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ..? ಅದನ್ನು ಕೇಳಿದರೆ ನೀವು  ಶಾಕ್ ಆಗುತ್ತೀರಿ. ಕಿರುತೆರೆಯ ಮೇಲೆ ಅಕ್ಟೋಬರ್ 1ರಿಂದ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದು, ಅಂದಿನಿಂದ ಬಿಗ್ ಬಾಸ್ ಆರಂಭವಾಗಲಿದೆ. 11ನೇ ಸೀಸನ್ ನ ಪ್ರತಿ ಎಪಿಸೋಡ್ ಗಾಗಿ ಸಲ್ಮಾನ್ ಖಾನ್ 11ಕೋ.ರೂ  ಸಂಭಾವನೆ ಪಡೆಯಲಿದ್ದಾರಂತೆ. ವಾರದಲ್ಲಿ ಎರಡು ದಿನ ಶೂಟಿಂಗ್ ನಡೆಯಲಿದ್ದು, ಪ್ರತಿ ವಾರ 22ಕೋ.ರೂ ಪಡೆಯಲಿದ್ದಾರಂತೆ. ಕಳೆದವರ್ಷ ಪ್ರತಿ ಎಪಿಸೋಡ್ ಗೆ 8ಕೋಟಿ ರೂ. ಪಡೆಯುತ್ತಿದ್ದು, ಈ ಬಾರಿ 11ಕೋ.ರೂ.ಪಡೆಯುತ್ತಿದ್ದಾರೆ. ಇದೀಗ ಗಲ್ಲಾ ಪೆಟ್ಟಿಗೆಯ ಜೊತೆ ಟಿವಿ ಜಗತ್ತಿನಲ್ಲಿಯೂ ಸಲ್ಮಾನ್ ಪ್ರಾಬಲ್ಯ ಹೆಚ್ಚಿದಂತಾಗಿದೆ. (ಎಸ್.ಎಚ್)

Leave a Reply

comments

Related Articles

error: