ಕ್ರೀಡೆಮೈಸೂರು

ಪಂಜಕುಸ್ತಿಗೆ ಅಣುಕು ಪ್ರದರ್ಶನದ ಮೂಲಕ ಚಾಲನೆ ನೀಡಿದ ಐಜಿ.ವಿಪುಲ್ ಕುಮಾರ್

ಮೈಸೂರು,ಸೆ.25:-ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಐದನೇ ದಿನಕ್ಕೆ ಕಾಲಿರಿಸಿದೆ.

ಕುಸ್ತಿ ಉಪಸಮಿತಿ ವತಿಯಿಂದ 3ನೇ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಪಂಜಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂಜಕುಸ್ತಿ ಪಂದ್ಯಾವಳಿಗೆ ಐಜಿ.ವಿಪುಲ್ ಕುಮಾರ್ ಚಾಲನೆ ನೀಡಿದರು. ಐಜಿ ವಿಪುಲ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಡಿ.ರಂದೀಪ್ ಪಂಜಕುಸ್ತಿಯ ಅಣುಕು ಪ್ರದರ್ಶನದ ಮೂಲಕ ಚಾಲನೆ ನೀಡಿದರು. ಮೇಯರ್ ಎಂ.ಜೆ. ರವಿಕುಮಾರ್, ಎಸ್.ಪಿ.ರವಿ ಚನ್ನಣ್ಣನವರ್, ಪಾಲಿಕೆ ಆಯುಕ್ತ ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.  ನೂರಾರು ಪಂಜಕುಸ್ತಿ ಮಹಿಳಾ ಮತ್ತು ಪುರುಷರ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟು ರೀಟಾ ಪ್ರಿಯಾಂಕ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: