ಮನರಂಜನೆ

‘ಮುಂಗಾರು ಮಳೆ 2’ ಖ್ಯಾತಿಯ ನೇಹಾ ಶೆಟ್ಟಿ ಟಾಲಿವುಡ್ ಗೆ ಎಂಟ್ರಿ

ಬೆಂಗಳೂರು, ಸೆ.25: ‘ಮಿಸ್ ಮಂಗಳೂರು’ ಕಿರೀಟವನ್ನು ತನ್ನದಾಗಿಸಿಕೊಂಡಿದ್ದ ನೇಹಾ ಶೆಟ್ಟಿ ‘ಮುಂಗಾರು ಮಳೆ 2’ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಹೊಸ ಭರವಸೆಯನ್ನು ಮೂಡಿಸಿದ್ದರು. ಇದೀಗ ನೇಹಾ ಶೆಟ್ಟಿ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿರುವುದು ವಿಶೇಷವಾಗಿದೆ. ಪೂರಿ ಜಗನ್ನಾಥ್ ತಮ್ಮ ಪುತ್ರ ಆಕಾಶ್ ಪೂರಿಯನ್ನು ಹೀರೋ ಆಗಿ ಟಾಲಿವುಡ್ ಗೆ ಪರಿಚಯಿಸಲು ಮುಂದಾಗಿದ್ದು, ಆ ಚಿತ್ರದ ನಾಯಕಿ ಪಾತ್ರಕ್ಕೆ ನೇಹಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ನೇಹಾ ಟಾಲಿವುಡ್ ಗೆ ಎಂಟ್ರಿ ಆಗಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ಪೂರಿ ಕನೆಕ್ಟ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಈ ಚಿತ್ರ ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮೂರೇ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಲು ಪೂರಿ ಪ್ಲ್ಯಾನ್ ಮಾಡುತ್ತಿದ್ದಾರಂತೆ. ಇನ್ನೂ ಪೂರಿ ಪುತ್ರ , ಈ ಚಿತ್ರದ ಹೀರೋ ಆಕಾಶ್, ಚಿರು ಪುತ್ರ ರಾಮಚರಣ್ ಅಭಿನಯದ ಮೊದಲ ಚಿತ್ರ ‘ಚಿರುತ’ದಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. 2015ರಲ್ಲಿ ‘ಆಂಧ್ರಾ ಪೋರಿ’ ಎನ್ನೋ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. (ವರದಿ: ಎಲ್.ಜಿ)

Leave a Reply

comments

Related Articles

error: