ದೇಶಪ್ರಮುಖ ಸುದ್ದಿ

ಪಠಾಣ್ ಕೋಟ್ ದಾಳಿ ಸಂದರ್ಭ ಸೂಕ್ಷ್ಮ ವಿಚಾರಗಳ ಬಿತ್ತರ: 1 ದಿನ ಎನ್ಡಿಟಿವಿಗೆ ಪ್ರಸಾರ ನಿರ್ಬಂಧ ಸಾಧ್ಯತೆ

ನವದೆಹಲಿ: ಪಠಾಣ್ ಕೋಟ್ ಉಗ್ರ ದಾಳಿ ಸಂದರ್ಭ ಸೂಕ್ಷ್ಮ ವಿಚಾರಗಳನ್ನು ಬಿತ್ತರ ಮಾಡುವ ಮೂಲಕ ಪ್ರಸಾರ ನಿಯಮ ಉಲ್ಲಂಘಿಸಲಾಗಿದೆ ಎಂದು ಎನ್ಡಿಟಿವಿ ಇಂಡಿಯಾಗೆ 1 ದಿನ ನಿಷೇಧ ಹೇರಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಶಿಫಾರಸು ಮಾಡಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಉಗ್ರರ ದಾಳಿಗಳಂಥ ಸಂದರ್ಭ ನೇರ ಪ್ರಸಾರ ಮಾಸುವಂತಿಲ್ಲ ಎಂಬ ನಿಯಮವಿದ್ದರೂ ಅಂತರ ವಿಷಯಗಳನ್ನು ಬಿತ್ತರಿಸಿದ್ದಕ್ಕಾಗಿ ವಾಹಿನಿಯೊಂದರ ವಿರುದ್ಧ ನೀಡಲಾಗುತ್ತಿರುವ ಮೊದಲ ಆದೇಶವಾಗಲಿದೆ ಎನ್ನಲಾಗಿದೆ. ನ.9 ರಂದು ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿ ಎನ್ಡಿಟಿವಿಗೆ ಆದೇಶಿಸಿದೆ ತಿಳಿದುಬಂದಿದೆ.

ಪಠಾಣ್ ಕೋಟ್ ದಾಳಿಯ ವೇಳೆ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಮಿಗ್, ಯುದ್ಧ ವಿಮಾನಗಳು, ರಾಕೆಟ್ ಉಡಾವಕಗಳು, ಮಾರ್ಟರ್, ಹೆಲಿಕಾಪ್ಟರ್, ಇಂಧನ ಟ್ಯಾಂಕ್ ಇತ್ಯಾದಿ ವಿವರಗಳನ್ನು ವಾಹಿನಿ ಪ್ರಸಾರ ಮಾಡಿತ್ತು. ಭಯೋತ್ಪಾದಕರಿಗೆ ಈ ಮಾಹಿತಿಯ ವಿವರಗಳು ಲಭ್ಯವಾಗಿದ್ದರೆ, ನಾಗರಿಕರ ಮತ್ತು ರಕ್ಷಣಾ ಪಡೆಯ ಸಿಬ್ಬಂದಿಯ ಪ್ರಾಣಗಳಿಗೆ ಭಾರಿ ಹಾನಿಯುಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ವಾಹಿನಿಗಳ ವಿದ್ದ ಸಮಿತಿ ಕ್ರಮಕೈಗೊಳ್ಳಲು ಸಮಿತಿ ನಿರ್ಧರಿಸಿದ್ದು, ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್ಡಿಟಿಟಿ ಸಮರ್ಥನೆ:

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಈ ಶಿಸ್ತುಕ್ರಮ ಕುರಿತಂತೆ ಎನ್ಡಿಟಿವಿ ಪ್ರತಿಕ್ರಿಯೆ ನೀಡಿದ್ದು, ನಾವು ಪ್ರಸಾರ ಮಾಡಿದ ವಸ್ತುನಿಷ್ಠವಾಗಿತ್ತು. ಹಾಗೂ ಈ ಮಾಹಿತಿಗಳನ್ನು ಸಾಕಷ್ಟು ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲೂ ಹಾಕಲಾಗಿತ್ತು. ಅದೇ ಮಾಹಿತಿಯನ್ನೇ ನಾವೂ ಪ್ರಸಾರ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.

Leave a Reply

comments

Related Articles

error: