ಮನರಂಜನೆ

ನ್ಯೂಟನ್ ಚಿತ್ರೀಕರಣ ವೇಳೆ ರಾಜಕುಮಾರ್ ರಾವ್ ಕಳೆದುಕೊಂಡಿದ್ದೇನು..?

ದೇಶ(ಮುಂಬೈ)ಸೆ.25:- ನಟ ರಾಜಕುಮಾರ್ ರಾವ್ ನಟಿಸಿದ ಇತ್ತೀಚೆಗೆ ತೆರೆ ಕಂಡ ಚಿತ್ರ ನ್ಯೂಟನ್ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುತ್ತಿದೆ. ಅಲ್ಲದೇ ವೀಕ್ಷಕರು ಹಾಗೂ ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ. ಈ ಚಿತ್ರದ ಚಿತ್ರೀಕರಣದ ವೇಳೆ ರಾಜಕುಮಾರ್ ರಾವ್ ಜೀವನದಲ್ಲಿ ಅಮೂಲ್ಯವಾಗಿರುವುದನ್ನು  ಕಳೆದುಕೊಂಡಿದ್ದಾರೆ. ಏನದು..?ಈ ಚಿತ್ರದ ಚಿತ್ರೀಕರಣದ ವೇಳೆ  ಅವರ ತಾಯಿ ಇಹಲೋಕ ತ್ಯಜಿಸಿದ್ದು, ಈ ವಿಷಯ ಬಹುತೇಕರಿಗೆ ತಿಳಿದಿರಲಿಲ್ಲ.

ನ್ಯೂಟನ್ ಚಿತ್ರೀಕರಣ ನಡೆಯುತ್ತಿರುವ ಸಮಯದಲ್ಲಿ ರಾಜಕುಮಾರ್ ರಾವ್  ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಫಿಲ್ಮ್ ಗೆ ಸಿಗುತ್ತಿರುವ ಪ್ರಶಂಸೆ ಮತ್ತು ಆಸ್ಕರ್ ಪ್ರಶಸ್ತಿಗೆ ಚಿತ್ರ ಎಂಟ್ರಿಯಾಗಿರುವ ಕುರಿತು ಮಾತನಾಡಿದ ರಾಜಕುಮಾರ್ ರಾವ್ ನ್ಯೂಟನ್ ಜೊತೆ ಏನೆಲ್ಲಾ ಒಳ್ಳೆಯದು ಆಗುತ್ತಿದೆ ಅದು ನಮ್ಮ ತಾಯಿಯ ಆಶೀರ್ವಾದದಿಂದಲೇ ಲಭಿಸುತ್ತಿದೆ. ನನ್ನ ತಾಯಿ ನನ್ನ ಜೊತೆಯೇ ಇದ್ದಾರೆ. ಅವರ ಆಶೀರ್ವಾದ ಸದಾ ನನ್ನ ಜೊತೆಗಿರುತ್ತದೆ. ನನಗೋಸ್ಕರ ನನಗೆ ಸರಿಯಾದ ಮಾರ್ಗವನ್ನು ತಿಳಿಸಲು ನಕ್ಷತ್ರವಾಗಿದ್ದಾರೆ ಎಂದಿದ್ದಾರೆ.  ನ್ಯೂಟನ್ 67ನೇ ಬರ್ಲಿನ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡಿದೆ. ವಿದೇಶಿ ಚಲನಚಿತ್ರ ವಿಭಾಗದಲ್ಲಿ ಆರ್ಟ್ ಸಿನಿಮಾ ಎಂದು ಪ್ರಶಸ್ತಿಯನ್ನು ಪಡೆಯಿತು. ಹಾಂಗ್ ಕಾಂಗ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಉತ್ತಮ ಚಿತ್ರಕ್ಕಾಗಿ ತೀರ್ಪುಗಾರರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.(ಎಸ್.ಎಚ್)

Leave a Reply

comments

Related Articles

error: