ಮೈಸೂರು

ಭಾರತದಲ್ಲಿ ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನಕ್ಕೆ ಹೆಚ್ಚು ಪ್ರಾಶಸ್ತ್ಯ: ಪ್ರೊ. ಪದ್ಮನಾಭನ್

ಭಾರತದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನ ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಹಾಗೂ ಬೆಳೆಯುತ್ತಿದೆ ಎಂದು ಪ್ರೊ. ಪದ್ಮನಾಭನ್ ತಿಳಿಸಿದರು.

ನಗರದ ಮಾನಸ ಗಂಗೋತ್ರಿಯ ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ಜೀವ ವಿಜ್ಞಾನ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜೈವಿಕ ವಿಜ್ಞಾನ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದ್ದು, ದೇಶದಲ್ಲಿ ಸುಮಾರು 11 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಶೇ.20ರಷ್ಟು ಬೆಳೆದಿದೆ. ಇಂದಿನ ಯುವಜನತೆ ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದು, ನೂತನ ಸಂಶೋಧನೆಯಲ್ಲಿ ತೊಡಗಿಕೊಂಡು ಹೊಸ ಆವಿಷ್ಕಾರಗಳಿಗೆ ಕಾರಣರಾಗಬೇಕೆಂದು ಹೇಳಿದರು.

ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಬಿ.ವಿ. ಶ್ಯಾಮಲಾ ಮಾತನಾಡಿ, ವಿಜ್ಞಾನ ತನ್ನ ಒಡಲಲ್ಲಿ ಅದ್ಭುತಗಳನ್ನು ಇರಿಸಿಕೊಂಡಿದ್ದು, ನಾವು ವಿಜ್ಞಾನ ಗಣಿತ ಮತ್ತು ಭೌತಶಾಸ್ತ್ರಗಳ ಇತಿಹಾಸ ಗಮನಿಸಿದಾಗ ವಿಜ್ಞಾನದ ಮೂಲ ವಿಷಯಗಳಾದ ಜೀವಶಾಸ್ತ್ರ ಮತ್ತಿತರ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿರಲಿಲ್ಲ. ಆದರೆ, ಕಾಲ ಬದಲಾದಂತೆ ಇಂದು ಜೀವ ವಿಜ್ಞಾನ ಮತ್ತು ಜೀವಶಾಸ್ತ್ರಗಳತ್ತ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆಂದರು.

ಕೇಂದ್ರ ನಿರ್ದೇಶಕಿ ಪ್ರೊ. ಮಿಡತಲ ರಾಣಿ, ಪ್ರೊ. ಎಂ.ಬಾಗ್ಯ ಇದ್ದರು.

Leave a Reply

comments

Related Articles

error: