ಕರ್ನಾಟಕಮೈಸೂರು

ಮೈಸೂರು ದಸರಾ ಮಹೋತ್ಸವ : ಸೆ.26ರ ಕಾರ್ಯಕ್ರಮಗಳು

ಬೆಳಿಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲು ಯೋಗ ಚಾರಣಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಅವರು ಉದ್ಘಾಟಿಸುವರು.

ಬೆಳಿಗ್ಗೆ 10 ಗಂಟೆಗೆ  ಜಗನ್ಮೋಹನ ಅರಮನೆ ವಿಶಿಷ್ಠ ಕವಿಗೋಷ್ಠಿಗೆ ವಿಧಾನ ಪರಿಷತ್ ಸದಸ್ಯ ಡಾ.ಜಯಮಾಲ ಅವರಿಂದ ಉದ್ಘಾಟನ

ಬೆಳಿಗ್ಗೆ 10 ಗಂಟೆಗೆ ಜಗನ್ಮೋಹನ ಅರಮನೆ:

ವಿಶಿಷ್ಠ ಕವಿಗೋಷ್ಠಿ: ಸಮಾಜದ ನಿರ್ಲಕ್ಷಿತ, ಶೋಷಿತ, ದಮನಿತರ, ಅಸಹಾಯಕ ಹಾಗೂ ಅನಾಥ ಚೈತನ್ಯಗಳ ಮತ್ತು ವಿಶೇಷ ಚೇತನರ ಪ್ರತಿಭೆ ಅನಾವರಣ. ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ಶ್ರೀಮತಿ ಉಮಾಶ್ರೀ ಅವರ ವಿಶೇಷ ಉಪಸ್ಥಿತಿ, ಲೇಖಕಿ ಕೆ.ನೀಲಾ, ಮುಖ್ಯ ಅಥಿತಿ, ವಿಧಾನ ಪರಿಷತ್ ಸದಸ್ಯರು ಜಯಮಾಲ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಮಾನಸ ಗಂಗೋತ್ರಿ ಸೆನೆಟ್ ಭವನ ಸಂವಿಧಾನ-ಪ್ರಜಾಸತ್ತೆ-ಸಮಾನತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯದ ಸುಬ್ರೋ ಕಮಲ್ ಮುಖರ್ಜಿ ಅವರು ಉದ್ಘಾಟಿಸುವರು.
ಬೆಳಿಗ್ಗೆ 10-30 ಗಂಟೆಗೆ ಜೆ.ಕೆ. ಮೈದಾನದಲ್ಲಿ ಜಾನಪದ ನೃತ್ಯಕ್ಕೆ ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವೆ ಎಂ.ಸಿ. ಮೋಹನ್‍ಕುಮಾರಿ (ಗೀತಾ) ಅವರು ಉದ್ಘಾಟಿಸುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು :

ಅಂಬಾವಿಲಾಸ ಅರಮನೆ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಕನ್ನಡ ಡಿಂಡಿಮ ಸುಗಮ ಸಂಗೀತ ಮುದ್ದು ಕ್ರಷ್ಣ ಮತ್ತು ತಂಡ (ಸಂಜೆ 6:00-7:30); ಶಾಸ್ತ್ರೀಯ ನೃತ್ಯ, ದೇವಯಾನಿ ಮತ್ತು ತಂಡ, (ಸಂಜೆ 7:30-8:30); ಕರ್ನಾಟಕ ಶಾಸ್ತ್ರೀಯ ಸಂಗೀತ, ವಿದ್ವಾನ್ ಟಿ.ಎಂ.ಕೃಷ್ಣ, ಚೆನ್ನೈ (ರಾತ್ರಿ 8:30-10:00).

ಪುರಭವನ ವೇದಿಕೆ: ಮಾಧ್ಯಮ ರಂಗ ಮೈಸೂರು ಜಿಲ್ಲಾ ಮಾಧ್ಯಮ ಸಂಘಟನೆ, (ಬೆಳಗ್ಗೆ 10:00); ಸೆರೆ ಅಂಗಡಿ ಸಂಗವ್ವ ನಾಟಕ, ಜೇವರ್ಗಿ ರಾಜಣ್ಣ ತಂಡ, ಕಲಬುರಗಿ (ಮಧ್ಯಾಹ್ನ 3:00); ಬಸ್ ಕಂಡಕ್ಟರ್, ವಿರೇಶ್ವರ ನಾಟ್ಯ ಸಂಘ, ಧಾರವಾಡ (ರಾತ್ರಿ 7:00-9:00).

ಜಗನ್ಮೊಹನ ಅರಮನೆ ವೇದಿಕೆ: ಸಿಂಗಿಚಾಮ್, ದಕ್ಷಿಣ ವಲಯ ಸಾಶ್ಕ್ರತಿಕ ಕೇಂದ್ರದ ಸಿಕ್ಕೀಂ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಸುಗಮ ಸಂಗೀತ, ರಾಮು, ಶಾಗ್ಯ, ಚಾಮರಾಜನಗರ (ಸಂಜೆ 6:00-7:00); ಲಯಲಹರಿ ವಾದ್ಯ ಸಂಗೀತ, ಶಿವಶಂಕರ್ ಮತ್ತು ತಂಡ, ಬೆಂಗಳೂರು (7:00-8:00); ಮೋಹಿನಿ ಅಟ್ಟಂ, ದಕ್ಷಿಣವಲಯ ಸಾಂಸಕ್ರತಿಕ ಕೇಂದ್ರದ ಕೇರಳ ಕಲಾವಿದರಿಂದ (8:00-9:00).

ಕಲಾಮಂದಿರ ವೇದಿಕೆ: ಹೋರಾಟದ ಹಾಡುಗಳು, ಹನಸೋಗೆ ಸೋಮಶೇಖರ್ ಮತ್ತು ತಂಡ, ಮೈಸೂರು (ಸಂಜೆ 5:30-6:00); ನೃತ್ಯ ರೂಪಕ ಅರೆಬಾóಷೆ ಸಿರಿ ಸಂಭ್ರಮ, ಅಭಿನಯ ಕಲಾ ಮಿಲನ ಚಾರಿಟೆಬಲ್ ಟ್ರಸ್ಟ್, ಕೊಡಗು (ಸಂಜೆ 6:00-7:00); ವಚನ ಗಾಯನ, ಜಯದೇವಿ ಜಂಗಮಯ್ಯ, ಧಾರವಾಡ (ಸಂಜೆ 7:00-8:00); ಕೂಡಲ ಸಂಗಮ ರೂಪಕ, ನಿರಂತರ ಮೈಸೂರು (8:00-9:00).

ಗಾನಭಾರತಿ ವೇದಿಕೆ: ತಪಟಗಲ್ಲು, ದಕ್ಷಿಣವಲಯ ಸಾಂಸ್ಕ್ರತಿಕ ಕೇಂದ್ರ ಆಂಧ್ರ ಪ್ರದೇಶ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಕರ್ನಾಟಕ ಸಂಗೀತ, ರೇಖಾ ಹರಿನಾಥ್ ಮತ್ತು ತಂಡ, ಬೆಂಗಳೂರು (ಸಂಜೆ6:00- 7:00), ಸುಗಮ ಸಂಗೀತ, ನಾಗರಾಜ್ ಮತ್ತು ತಂಡ, ಚಿಕ್ಕಮಗಳೂರು (ಸಂಜೆ 7:00- 8:00); ಭರತ ನಾಟ್ತ, ಖುಷಿ ಶೈಲೇಂದರ್ ರಂಗದಾಳ, ಕಲಬುರಗಿ (ರಾತ್ರಿ 8:00- 9:00).

ಚಿಕ್ಕಗಡಿಯಾರ ವೇದಿಕೆ: ಪುರಿಯಾಬಾವ, ದಕ್ಷ್ಷಿಣವಲಯ ಸಾಂಸ್ಕ್ರತಿಕ ಕೇಂದ್ರ ಪಶ್ಚಿಮ ಪಂಗಾಳ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಜಾನಪದ ಗಾಯನ, ಹೊನಗನಹಳ್ಳಿ ಸಿದ್ದರಾಜು ಮತ್ತು ತಂಡ, ರಾಮನಗರ (ಸಂಜೆ 6:00- 7:00); ಸುಗಮ ಸಂಗೀತ, ಜಾರ್ಜ ಪ್ರಬಾಕರ್ ಮತ್ತು ತಂಡ, ಮೈಸೂರು (ಸಂಜೆ 7:00- 8:00); ಭಾವಗೀತೆಗಳು, ಗಾಯತ್ರಿ ಶ್ರೀಧರ್ ಮತ್ತು ತಂಡ, ಬೆಂಗಳೂರು (ರಾತ್ರಿ 8:00- 9:00).

ಚಲನಚಿತ್ರೋತ್ಸವ :

ಐನಾಕ್ಸ್ ಚಿತ್ರಮಂದಿರ: ಸ್ಕ್ರೀನ್ 1ರಲ್ಲಿ  ಮೈಸೂರು ದಸರಾ ಚಲನಚಿತ್ರೋತ್ಸವ ವಾಜ್ದ (10:00); ವೈಲ್ಡ್ ಸ್ಟ್ರಾಬೆರೀಸ್ (12:00); 24 ವೀಕ್ಸ್ (3:00); ಮ್ಯಾನ್ ಹೋಲ್ (5:30).

ಐನಾಕ್ಸ್ ಚಿತ್ರಮಂದಿರ: ಸ್ಕ್ರೀನ್ 2ರಲ್ಲಿ  ಮೈಸೂರು ದಸರಾ ಚಲನಚಿತ್ರೋತ್ಸವ ಭಾರತೀಯ ಪನೊರಮಾ ಸ್ಕ್ರೀನ್-2, ಇಮಾ ಸಾಬಿತ್ರಿ (10:30); ಲೇಡಿ ಆಫ್ ದಿ ಲೇಕ್ (11:30); ಮೆಮೊರಿ ಆಫ್ ಫರಗಟ್ಟನ್ ವಾರ್ (1:30); ಕೆ ಸೆರ ಸೆರ (4:30).

ಡಿ. ಆರ್. ಸಿ. ಚಿತ್ರಮಂದಿರ: ಮೈಸೂರು ದಸರಾ ಚಲನಚಿತ್ರೋತ್ಸವ, ಬಂಗಾರು ಸನ್ ಆಫ್ ಬಂಗಾರದ ಮನುಷ್ಯ (10:00); ನೀರ್ ದೊಸೆÀ (1:00); ರಾಜಕುಮಾರ (4:00); ಕಹಿ (7:00).

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: ಜನಪ್ರೀಯ ಆಹಾರ ಮೇಳ, “ಜಿ.ಎಸ್.ಟಿ ಮತ್ತು ಪ್ರವಾಸೋದ್ಯಮ ಹಾಗೂ ಬಡತನ ನಿವಾರಣೆ” ವಿಚಾರ ಮಂಡನೆ ಡಾ. ಮಹಾದೇವ ಮೂರ್ತಿ, ಮುಕ್ತ ವಿವಿ ಸೈಕ್ಷಣಿಕ ಡೀನ್(ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಹಿರಿಯ ಪುರುಷ/ಮಹಿಳೆಯರ ವಿಭಾಗದಲ್ಲಿ ಸಿರಿಧಾನ್ಯ ಅಡುಗೆÀ (ಮಧ್ಯಹ್ನಾ 12:00-2:00); ಸವಿಭೋಜನ ಸ್ಪರ್ಧೆ, ಹುರಿಗಡ್ಲೆ ಬೆಲ್ಲ ತಿನ್ನುವ ಸ್ಪರ್ಧೆ (3:00-4:00); ಪುರವಂತಿಕೆ, ಶವಪುತ್ರ ಶೆಟ್ಟರು (5:00-6:00); ಶಾಸ್ತ್ರೀಯ ಸಂಗೀತ ಸಂಗೀತ, ಸುಮಂಗಲ ಜಂಗಮಶೆಟ್ಟಿ (6:00-7:30); ಹಳೆಯ ಕನ್ನಡ ಚಲನಚಿತ್ರ ಗೀತೆಗಳು, ಲತಾ ಪುಟ್ಟಸ್ವಾಮಿ ತಂಡ (7:30-10:00).

ಲಲಿತಮಹಲ್ ಪಕ್ಕದ ಮುಡಾ ಮೈದಾನ: ಜನಪ್ರೀಯ ಆಹಾರ ಮೇಳ, “ಜಿ.ಎಸ್.ಟಿ ಮತ್ತು ಪ್ರವಾಸೋದ್ಯಮ ಹಾಗೂ ಬಡತನ ನಿವಾರಣೆ” ವಿಚಾರ ಮಂಡನೆ ಪ್ರೋ. ಯಶವಂತ್ ಡೋಂಗ್ರೆ, ಮೈಸೂರು ವಿವಿ (ಬೆಳಗ್ಗೆ 10:00); ನಳಪಾಕ ಸ್ಪರ್ಧೆ, ಹಿರಿಯ ಪುರುಷ/ಮಹಿಳೆಯರ ವಿಭಾಗದಲ್ಲಿ ಸಿರಿಧಾನ್ಯ ಅಡುಗೆ (ಮಧ್ಯಹ್ನಾ 12:00-2:00); ಸವಿಭೋಜನ ಸ್ಪರ್ಧೆ, ಹುರಿಗಡ್ಲೆ ಬೆಲ್ಲ ತಿನ್ನುವ ಸ್ಪರ್ಧೆ (3:00-4:00); ಸುಗಮ ಸಂಗೀತ, ನಿಶಾ ಗಂಗಾಧರ್ (5:00-6:00); ಸಮಕಾಲೀನ ನೃತ್ಯ, ಶಶಾಂಕ್, (6:00-7:30); ಹಳೆಯ ಹಿಂದಿ ಚಲನಚಿತ್ರ ಗೀತೆಗಳು, ಮ್ಯೂಸಿಕ್ ಮೇಕರ್ಸ್ (7:30-10:00).

ಯುವ ದಸರಾ :

ಸಂಜೆ 6 ಗಂಟೆಗೆ ಮಹಾರಾಜಾ ಕಾಲೇಜು ಮೈದಾನ: ಯುವ ದಸರಾ ಕಾರ್ಯಕ್ರಮ, ವಿವಿಧ ಕಾಲೇಜು ತಂಡಗಳಿಂದ ನೃತ್ಯ ಕಾರ್ಯಕ್ರಮ; ಬಾಲಿವುಡ್ ಗಾಯಕಿ ನೀತಿ ಮೋಹನ್ ಅವರಿಂದ ಸಂಗೀತ ಕಾರ್ಯಕ್ರಮ,

ಫಲಪುಷ್ಪ ಪ್ರದರ್ಶನ :

ಬೆಳಿಗ್ಗೆ 9 ಗಂಟೆಗೆ ನಿಷಾಧ್ ಬಾಗ್ (ಕುಪ್ಪಣ್ಣ ಪಾರ್ಕ): ದಸರಾ ಫಲಪುಷ್ಪ ಪ್ರದರ್ಶನ.

ಬೆಳಿಗ್ಗೆ 9 ಗಂಟೆಗೆ  ಕುಕ್ಕರಹಳ್ಳಿ ಕೆರೆ: ದಸರಾ ಪುಷ್ಪ ಪ್ರದರ್ಶನ.

ಕನ್ನಡ ಪುಸ್ತಕ ಮಾರಾಟ ಮೇಳ :

ಸಂಜೆ 5 ಗಂಟೆಗೆ ಕಾಡಾ ಕಚೇರಿ ಆವರಣ: ಕನ್ನಡ ಪುಸ್ತಕ ಮಾರಾಟ ಮೇಳ, ವಚನ ಗಾಯನ, ಶ್ರೀಮತಿ ಶ್ವೇತಾ ಮಡಪ್ಪಾಡಿ ಮತ್ತು ತಂಡ.

ಉರ್ದು ಕವಿ ಗೋಷ್ಠಿ :

ರಾತ್ರಿ 9-30 ಗಂಟೆಗೆ ಗೋಲ್ಡನ್ ಪ್ಯಾಲೇಸ್ ಕನ್ವೆನ್ಶನ್ ಹಾಲ್: ಮುಶೈರ (ಉರ್ದು ಕವಿ ಗೋಷ್ಠಿ)ಗೆ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಅವರು ಉದ್ಘಾಟಿಸುವರು.

ಕುಸ್ತಿ :

ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣ: ದಸರಾ ಮಹೋತ್ಸವ ನಾಡಕುಸ್ತಿ, ಮೈಸೂರು ವಿಭಾಗ ಮಟ್ಟದ ಕುಸ್ತಿ, 35 ನೇ ರಾಜ್ಯ ಮಟ್ಟದ ಪುರುಷರ ಮತ್ತು ಬಾಲಕರ ಅಚಿತಿಮ ಕುಸ್ತಿ ಪಂದ್ಯಾವಳಿ. (ಮಧ್ಯಾಹ್ನ 3:00).

(ಎನ್.ಬಿ)

Leave a Reply

comments

Related Articles

error: