
ಕರ್ನಾಟಕ
ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 10.66 ಲಕ್ಷ ನಿವ್ವಳ ಲಾಭ ಗಳಿಸಿದೆ ; ಕುಂದಳ್ಳಿ ದಿನೇಶ್
ರಾಜ್ಯ(ಮಡಿಕೇರಿ)ಸೆ.25:- ಸೋಮವಾರಪೇಟೆ ಸಮೀಪದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2016-17ನೇ ಸಾಲಿನಲ್ಲಿ ಒಟ್ಟು 10.66 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಂದಳ್ಳಿ ದಿನೇಶ್ ತಿಳಿಸಿದರು.
ಶಾಂತಳ್ಳಿ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,2330 ಸದಸ್ಯರನ್ನು ಹೊಂದಿರುವ ಸಂಘವು 1.11 ಕೋಟಿ 99 ಸಾವಿರದಷ್ಟು ಪಾಲು ಬಂಡವಾಳ ಹೊಂದಿದೆ. ಸದಸ್ಯರಿಗೆ ರೂ. 10,11,86,261 ರೂ ಅಲ್ಪಾವಧಿ ಕೆಸಿಸಿ ಸಾಲ ವಿತರಿಸಲಾಗಿದೆ. ರೂ. 46,64,089 ವೇತನ ಆಧಾರಿತ ಸಾಲ, ರೂ.98,47,586 ಠೇವಣಿ ಆಧಾರಿತ ಸಾಲ, ರೂ. 20,74,710 ಆಭರಣ ಸಾಲ, ರೂ.42,79,520 ರಸಗೊಬ್ಬರ ಸಾಲ, ರೂ. 27,04,110 ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಿರುವ ರೂ. 5 ಸಾವಿರ ಮರಣ ನಿಧಿಯನ್ನು 10 ಸಾವಿರ ರೂಪಾಯಿಗಳಿಗೆ ಏರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷೆ ಕೆ.ಕೆ. ಚಂದ್ರಾವತಿ, ನಿರ್ದೇಶಕರುಗಳಾದ ಕೆ.ಕೆ. ಗೋಪಾಲ್, ಬಿ.ಎ. ಧರ್ಮಪ್ಪ, ಯು.ಎಂ. ಬಸವರಾಜು, ಜಿ.ಹೆಚ್. ರಾಜೇಶ್, ಕೆ.ಪಿ. ಗೌರಮ್ಮ, ಯು.ಕೆ. ದೇಶ್ರಾಜ್, ಬಿ.ಈ. ಜಯೇಂದ್ರ, ಬಿ.ಪಿ. ಅನಿಲ್ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ ಅವರುಗಳು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)