ಸುದ್ದಿ ಸಂಕ್ಷಿಪ್ತ

ವ್ಯಕ್ತಿಯ ಪತ್ತೆಗೆ ಮನವಿ

ಚಾಮರಾಜನಗರ, ಸೆ. 25 :- ಬದನಗುಪ್ಪೆ ಗ್ರಾಮದ ಶಿವಮ್ಮ ಅವರು ಅವರ ಪತಿ ದೊಡ್ಡಮಾಸ್ತೇಗೌಡರು ಜುಲೈ 10ರಂದು ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆವಿಗೂ ಬಂದಿರುವುದಿಲ್ಲ. ಇದೇ ರೀತಿ ಬೆಟ್ಟಕ್ಕೆ ಹೋಗಿ ತಡವಾಗಿ ಬರುತ್ತಿದ್ದುದರಿಂದ ಬರುತ್ತಾರೆಂದು ತಿಳಿದು, ನಂತರ ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಪತಿಯನ್ನು ಪತ್ತೆ ಮಾಡಿಕೊಡುವಂತೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

ವ್ಯಕ್ತಿಯು 70 ವರ್ಷದವರಾಗಿದ್ದು 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು, ಬಿಳಿ ಕೂದಲು ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಕನ್ನಡಕ ಹಾಕಿರುತ್ತಾರೆ.

ಇವರ ಕುರಿತು ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 08226-222243, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ 08226-222092 ಅಥವಾ ಜಿಲ್ಲಾ ನಿಸ್ತಂತು ಕೊಠಡಿ 08226-222383ಗೆ ತಿಳಿಸುವಂತೆ ಗ್ರಾಮಾಂತರ ಠಾಣೆ ಪಿಎಸ್‍ಐ ಎಂ.ಕೆ. ಲೋಹಿತ್ ಕುಮಾರ್ ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: