ಸುದ್ದಿ ಸಂಕ್ಷಿಪ್ತ

 ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ : ಪ.ಜಾ. ಪ.ಪಂ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 25 :- ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಜವಳಿ ಆಧಾರಿತ ಉದ್ದಿಮೆ ಹಾಗೂ ಕೈಗಾರಿಕೆಗಳನ್ನು ಸ್ವಂತವಾಗಿ ಸ್ಥಾಪಿಸಲು ಆಸಕ್ತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಭಾವಿ ಉದ್ಯಮಶೀಲರು, ಯುವಕ ಯುವತಿಯರಿಗಾಗಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯು 6 ದಿನಗಳದಾಗಿದ್ದು ಕನಿಷ್ಟ 18 ರಿಂದ 40ರ ವಯೋಮಿತಿಯೊಳಗಿರಬೇಕು. ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರಬೇಕು. ತರಬೇತಿ ಉಚಿತವಾಗಿದ್ದು ಸ್ವಂತ ಉದ್ಯೋಗ ಸ್ಥಾಪಿಸಲು ಉತ್ಸುಕರಾಗಿರಬೇಕು. ಯೋಜನಾ ವೆಚ್ಚದ ಶೇ.25ರಷ್ಟು ಮೊಬಲಗನ್ನು ಸ್ವಂತ ಬಂಡವಾಳ ಹೂಡಬೇಕು.

ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ, ಉದ್ಯಮಗಳ ಆಯ್ಕೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಹಾಗೂ ಹಣಕಾಸು ನಿರ್ವಹಣೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಬ್ಯಾಂಕಿನಿಂದ ದೊರೆಯುವ ಹಣಕಾಸು ಸೌಲಭ್ಯಗಳು ಹಾಗೂ ಇತರೆ ಮಾಹಿತಿಗಳ ಕುರಿತು ತರಬೇತಿ ನೀಡಲಾಗುವುದು.

ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್ 9ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08226-222883 ಅಥವಾ ಮೊಬೈಲ್ 9945164259, 9620053122ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: