ಮೈಸೂರು

ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷೆಯಾಗಿ ಮಲ್ಲಿಗೆ ವೀರೇಶ್ ಅಧಿಕಾರ ಸ್ವೀಕಾರ

ಮೈಸೂರಿನಲ್ಲಿ ಹೆಸರುವಾಸಿಯಾಗಿರುವುದೇ ಮೈಸೂರು ಮೃಗಾಲಯ ಮತ್ತು ಇಲ್ಲಿನ ಕಾರಂಜಿ ಕೆರೆ. ಕಾರಂಜಿಕೆರೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಜನಾಜಕರ್ಷಣೆಯ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಮೈಸೂರು ಮೃಗಾಲಯ ಪ್ರಾಧಿಕಾರದ ನೂತನ ಅಧ್ಯಕ್ಷೆ ಮಲ್ಲಿಗೆ ವೀರೇಶ್ ತಿಳಿಸಿದರು.

ಮೈಸೂರು ಮೃಗಾಲಯ ಪ್ರಾಧಿಕಾರದ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಗೆ ವೀರೇಶ್ ಅವರನ್ನು ಶುಕ್ರವಾರ ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ಕರಿಕಾಳನ್ ಮೃಗಾಲಯದ ಪ್ರಾಧಿಕಾರದ ಕಚೇರಿಯಲ್ಲಿ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಮಾತನಾಡಿದ ಮಲ್ಲಿಗೆ ವೀರೇಶ್ ಜನಾಕರ್ಷಣೆಯ ಕೇಂದ್ರಬಿಂದುವಾದ ಕಾರಂಜಿ ಕೆರೆಯ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು ಎಂದರು. ಪ್ರಾಣಿಗಳೆಂದರೆ ನನಗೆ ತುಂಬಾನೇ ಇಷ್ಟ. ಮೊಮ್ಮಕ್ಕಳನ್ನು ಕರೆದುಕೊಂಡು ನಾನು ವಾರಕ್ಕೊಮ್ಮೆಯಾದರೂ ಬರುತ್ತೇನೆ. ಆಗ ಇನ್ನಷ್ಟು ಅಭಿವೃದ್ಧಿಯಾದರೆ ಒಳ್ಳೆಯದಿತ್ತು ಅನಿಸಿತ್ತು. ಇದೀಗ ನನ್ನನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆಯಾಗಿ ಮಾಡಿರುವುದು ತುಂಬಾನೇ ಖುಷಿ ನೀಡಿದೆ. ಇಲ್ಲಿ ಹಸಿರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರೊಂದಿಗೆ, ಉಳಿಸಿಕೊಳ್ಳಲು ಶ್ರಮಿಸಲಾಗುವುದು. ಅಲ್ಲದೇ ಇಲ್ಲಿ ಮೀನುಗಳ ಅಕ್ವೇರಿಯಂ ಇಲ್ಲ. ಅದನ್ನು  ನಿರ್ಮಿಸಿ ಇನ್ನಷ್ಟು ಮೆರಗು ನೀಡಲಾಗುವುದು. ಕೆಲಸದಲ್ಲಿ ಇಲ್ಲಿನ ಅಧಿಕಾರಿಗಳೊಂದಿಗೆ ಸಹಕರಿಸಿ ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

Leave a Reply

comments

Related Articles

error: