ಮೈಸೂರು

ಮೂರೇ ನಿಮಿಷದಲ್ಲಿ ಲೀಟರ್ ಪುರಿ ತಿಂದ ಭೂಪ

ಮೈಸೂರು, ಸೆ.೨೫: ದಿನದಿಂದ ದಿನಕ್ಕೆ ರಂಗೇರುತ್ತಿರುವ ಆಹಾರ ಮೇಳ ಸೋಮವಾರ ಬಕಾಸುರರಿಗೆ ವೇದಿಕೆಯಾಯಿತು. ಅತ್ತ ಲೀಟರ್‌ಗಟ್ಟಲೇ ಕಡ್ಲೇಪುರಿ ತಿನ್ನುತ್ತಿದ್ದರೆ ಇತ್ತ ಸ್ಥಳದಲ್ಲೇ ಬಿಸಿಬೇಳೆ ಬಾತ್ ಮಾಡಿ ಪ್ರಶಸ್ತಿ ಗಿಟ್ಟಿಸಿದರು.
ಸೋಮವಾರ ಆಹಾರ ಮೇಳದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಆರು ಮಂದಿ ಯುವತಿಯರು ಸ್ಥಳದಲ್ಲೇ ಬಿಸಿಬೆಳೆ ಬಾತ್ ತಯಾರಿಸಿ ರುಚಿ ಸವಿದರೆ ಚಿನ್ನರು ನಿಮಿಷದಲ್ಲಿ ಲೀಟರ್‌ಗಟ್ಟಲೆ ಕಡಲೆ ಪುರಿಯನ್ನು ಬಕಬಕನೆ ತಿನ್ನುತ್ತಿದ್ದರು. ಮೂರೇ ನಿಮಿಷಕ್ಕೆ ಲೀಟರ್ ಪುರಿ ತಿಂದ ಮಂಡ್ಯದ ಲಿಖಿತ್‌ಗೌಡ ಪ್ರಶಸ್ತಿ ಗಿಟ್ಟಿಸಿದರು. ಪಿರಿಯಾಪಟ್ಟಣ ಮತೂರ್ ಕಾಲೋನಿಯ ಹಾಡಿ ಹುಡುಗ ಭರತ್‌ಖಂಡ್ರೆ ನಾಲ್ಕೂವರೆ ನಿಮಿಷದಲ್ಲಿ ಲೀಟರ್ ಪುರಿ ತಿಂದು ಎರಡನೇ ಸ್ಥಾನ ಪಡೆದ. ನಗರದ ಚಂದ್ರ ನಾಲ್ಕು ಮುಕ್ಕಾಲು ನಿಮಿಷದಲ್ಲಿ ಲೀಟರ್ ಪುರಿ ತಿಂದು ಮೂರನೇ ಸ್ಥಾನ ಪಡೆದ. ಗೋಕುಲಂನ ಸೀಮಾ-ಸಿಂಧು, ಒಂಟಿ ಕೊಪ್ಪಲಿನ ಸೌಮಶ್ರೀ-ಪಲ್ಲವಿ, ಬೊಗಾದಿಯ ಮೇಘನರಾಜ್, ಗೋಕುಲಂನ ಶೃತಿ-ಸ್ವಾಮಿ, ವಿಜಯನಗರದ ಶಿಲ್ಪಾ-ಮಮತ ಮತ್ತು ವಿಜಯನಗರದ ಕೆ.ಎಂ. ರಾಜಶ್ರೀ ಬಿಸಿಬೇಳೆ ಬಾತ್ ತಯಾರಿಸುವ ನಳಪಾಕ ಸ್ಫರ್ದೆಯಲ್ಲಿ ಭಾಗವಹಿಸಿದರು. ಸ್ಫರ್ಧಾ ವಿಜೇತರಿಗೆ ಪ್ರಥಮ ೧೫೦೦ ರೂ, ದ್ವೀತಿಯ ೧೦೦೦ ರೂ ಮತ್ತು ತೃತೀಯ ೭೫೦ ರೂ ನೀಡಲಾಯಿತು. (ವರದಿ ಬಿ.ಎಂ)

Leave a Reply

comments

Related Articles

error: