ಸುದ್ದಿ ಸಂಕ್ಷಿಪ್ತ

ನಾಳೆ ಮಕ್ಕಳ ದಸರಾ

ಮಡಿಕೇರಿ ಸೆ.25 : -ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳವಾರ (ಸೆ.26)ರಂದು ಆರನೇ ವರ್ಷದ   ಮಕ್ಕಳ ದಸರಾ ನಡೆಯಲಿದೆ.

ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಮಕ್ಕಳ ದಸರಾದ ಉದ್ಘಾಟನಾ ಸಮಾರಂಭ ಪೂರ್ವಾಹ್ನ 9.30ಕ್ಕೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿದ್ದು, ಮಕ್ಕಳ ದಸರಾವನ್ನು ಚಿಣ್ಣರೇ ಉದ್ಘಾಟಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ  ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ  ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಎ.ಸಿ.ದೇವಯ್ಯ,   ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ರೋಟರಿ ಮಿಸ್ಟಿ ಹಿಲ್ಸ್   ಗೌರವ ಕಾರ್ಯದರ್ಶಿ ಪಿ.ಎಂ.ಸಂದೀಪ್,  ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಂಗೀತಾ ಪ್ರಸನ್ನ, ಖಚಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ  ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಆ ನಂತರ ಜಿಲ್ಲೆಯ ಮಕ್ಕಳಿಗಾಗಿ ಮಕ್ಕಳಿಗಾಗಿ  ಸಂತೆ ,  ಅಂಗಡಿ,  ಸ್ಥಬ್ಧ ಮಂಟಪ,   ಚಲನವಲನವಿರುವ ಮಂಟಪ,  5 ವರ್ಷದೊಳಗಿನ ಮತ್ತು 6 ರಿಂದ 9 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆ, ಕ್ಲೇ ಮಾಡೆಲ್, ಸೈನ್ಸ್ ಮಾಡೆಲ್  ಸ್ಪರ್ಧೆಗಳು  ಆಯೋಜಿಸಲ್ಪಟ್ಟಿವೆ.

ಅದೇ ರೀತಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಎರಡನೇ ವರ್ಷದ ಜಾನಪದ ಕ್ರೀಡೋತ್ಸವ ಕೂಡಾ   ಜರುಗಲಿದ್ದು, ಜಾಪದ ಕ್ರೀಡೆಗಳಾದ ಕಲ್ಲಾಟ, ಲಗೋರಿ, ಬಳೆಯಾಟ ಗೋಲಿಯಾಟ,ಬುಗುರಿ, ಕುಂಟೆಬಿಲ್ಲೆ, ಚೌಕಾಬಾರ, ಚನ್ನಮಣೆ ಸ್ಪರ್ಧೆಗಳು ನಡೆಯಲಿವೆ.

ಮಕ್ಕಳ ದಸರಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಯಸುವ ಮಕ್ಕಳು ಬೆಳಗ್ಗೆ 9.30 ರೊಳಗಾಗಿ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: