ಮೈಸೂರು

ರಾಜ್ಯ ಮಟ್ಟದ ರಾಪಿಡ್ ಚೆಸ್ ಟೂರ್ನಮೆಂಟ್ ನ.6ರಂದು

ಮೈಸೂರು ಚೆಸ್ ಸೆಂಟರ್ ನಗರದ ಹೋಟೆಲ್ ಪ್ಯಾರಡೈಸ್‍ನಲ್ಲಿ ನವೆಂಬರ್ 6ರಂದು ಎಮ್‍.ಎನ್.ಕೃಷ್ಣ ರಾವ್ ಮೆಮೋರಿಯಲ್ ರಾಜ್ಯ ಮಟ್ಟದ ರಾಪಿಡ್ ಚೆಸ್ ಟೂರ್ನಮೆಂಟ್ ಅನ್ನು ಹಮ್ಮಿಕೊಂಡಿದೆ.

ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ವಿಜೇತರಿಗೆ 40 ಸಾವಿರ ರು. ಮತ್ತು ಕಪ್ ನೀಡಲಾಗುವುದು. ವಯಸ್ಸು ಆಧರಿಸಿ ವಿವಿಧ ವಿಭಾಗದಲ್ಲಿ 10 ಟ್ರೋಫಿಗಳನ್ನು ನೀಡಲಾಗುವುದು. ಅತ್ಯುತ್ತಮ ಕಿರಿಯ, ಅತ್ಯುತ್ತಮ ಮೈಸೂರಿನ ಚೆಸ್ ಆಟಗಾರ, ಉತ್ತಮ ಅಕಾಡೆಮಿ ಮತ್ತು ಉತ್ತಮ ಶಾಲೆ ಮೊದಲಾದ ಪ್ರಶಸ್ತಿಗಳನ್ನು ವಿತರಿಸಲಾಗುವುದು.

ಸ್ಥಳದಲ್ಲಿ ನೋಂದಣಿಗೆ ಅವಕಾಶವಿಲ್ಲ. ಭಾನುವಾರ ಬೆಳಗ್ಗೆ 8.30ರೊಳಗೆ ಹಾಜರಿರಬೇಕು. ಸ್ಪರ್ಧಿಗಳು ಚೆಸ್‍ ಸೆಟ್ ಮತ್ತು ಚೆಸ್‍ ಕ್ಲಾಕ್‍ಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ನಾಗೇಂದ್ರ- 8123819220/9980763063, ವಿಳಾಸ: ಮೈಸೂರು ಚೆಸ್ ಸೆಂಟರ್,#11, ಸ್ಮಿಮ್ಮಿಂಗ್ ಪೂಲ್ ರಸ್ತೆ, ಸರಸ್ವತಿಪುರಂ, ಮೈಸೂರು 0821-4288437 ಅನ್ನು ಸಂಪರ್ಕಿಸಿ.

Leave a Reply

comments

Related Articles

error: