ಮೈಸೂರು

ಮಂಗಳವಾರ ನಡೆಯಿತು ಪುಷ್ಪಾರ್ಚನೆ ತಾಲೀಮು

ಮೈಸೂರು,ಸೆ.26:- ವಿಜಯ ದಶಮಿ ಮೆರವಣಿಗೆಗೆ ದಿನಗಣನೆ ನಡೆದಿದ್ದು,ವಿಶ್ವವಿಖ್ಯಾತ ಜಂಬೂ ಸವಾರಿಗೆ ಇನ್ನು ಕೇವಲ ನಾಲ್ಕು ದಿನ ಮಾತ್ರ ಬಾಕಿ ಉಳಿದಿದ್ದು, ಅರಮನೆ ಆವರಣದಲ್ಲಿ ತಾಲೀಮು ನಡೆಯಿತು.

ಮಂಗಳವಾರ ಆನೆಗಳಿಗೆ ಮೆರವಣಿಗೆ ತಾಲೀಮು ನಡೆಸಲಾಗಿದ್ದು, ಜಂಬೂ ಸವಾರಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ. ಅದಕ್ಕಾಗಿ ನಾಲ್ಕು ದಿನ ಮುಂಚಿತವಾಗಿ ಪುಷ್ಪಾರ್ಚನೆ ತಾಲೀಮು ನಡೆಸಲಾಗಿದೆ. ಮೈಸೂರು ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗಿದ್ದು,ಅರ್ಜುನ ನೇತೃತ್ವದ ಎಲ್ಲ ಆನೆಗಳೂ ಪಾಲ್ಗೊಂಡಿವೆ. ಆನೆಗಳ ಸರತಿ ಸಾಲು ಪೂರ್ವನಿಗದಿಗಾಗಿ ಮರದ ಅಂಬಾರಿ ಹೊರುವ ತಾಲೀಮು ರದ್ದುಗೊಳಿಸಲಾಗಿದ್ದು, ಕೆ.ಎಸ್.ಆರ್.ಪಿ., ಡಿ.ಎ.ಆರ್., ಸಿ.ಎ.ಆರ್., ಅಶ್ವಾರೋಹಿ ದಳ, ಹೋಮ್ ಗಾರ್ಡ್ ಸಿಬ್ಬಂದಿಯಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು. ಡಿವೈಎಸ್ಪಿ ಶಿವರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ತಾಲೀಮಿಗೆ ಪೊಲೀಸ್ ಬ್ಯಾಂಡ್ ಹಿಮ್ಮೇಳ ನೀಡಿತ್ತು.ಡಿವೈಎಸ್ಪಿ ಶಿವರಾಜ್, ಎಸಿಪಿ ಶೈಲೇಂದ್ರ, ಇನ್ಸ ಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. (ಆರ್.ವಿ,ಎಸ್.ಎಚ್)

Leave a Reply

comments

Related Articles

error: