ಪ್ರಮುಖ ಸುದ್ದಿ

ನ್ಯಾಯಕೇಳಿ ಬಂದವರಿಗೆ ಕಾನೂನು ಬದ್ಧ ಅರಿವು ನೀಡಿ: ಯೋಗೇಶ್

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಸೆ.೨೬: ನ್ಯಾಯಕೇಳಲು ಪೊಲೀಸರ ಬಳಿ ಬರುವ ನೊಂದವರಿಗೆ ಕಾನೂನುಬದ್ದ ಅರಿವು ನೆರವು ನೀಡುವ ಮೂಲಕ ಕಾಯ್ದೆಯ ಉzಶ ಈಡೇರಿಕೆ ಸಾಧ್ಯವಾಗಲಿದೆ ಎಂದು ಪಟ್ಟಣದ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜೆ.ಯೋಗೇಶ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಪೊಲೀಸ್ ದೂರು ಪ್ರಾಧಿಕಾರದ ಸ್ಥಾಪನೆ ಹಾಗೂ ಸಂತ್ರಸ್ಥರ ಪರಿಹಾರ ಯೋಜನೆ ಬಳಕೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಸಿಡ್ ದಾಳಿ, ಅತ್ಯಾಚಾರಕ್ಕೊಳಗಾದವರಿಗೆ ೩ ಲಕ್ಷ ರೂ, ಅಪಘಾತದಿಂದ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ೨೫ ಸಾವಿರ ರೂಪಾಯಿಗಳನ್ನು ಕಾನೂನು ಸೇವಾ ಸಮಿತಿಯ ವತಿಯಿಂದ ಪರಿಹಾರ ನೀಡಲಾಗುತ್ತಿದ್ದು ಈ ಬಗ್ಗೆ ಠಾಣೆಗೆ ದೂರು ನೀಡಲು ಬರುವ ನೊಂದವರಿಗೆ ಸೂಕ್ತ ತಿಳುವಳಿಕೆ ನೀಡಿದರೆ ಕಾಯ್ದೆಯ ಉzಶ ಈಡೇರಲಿದೆ.
ತೊಂದರೆಗೊಳಗಾದ ಸಂತ್ರಸ್ತರು ನೀಡಿದ ದೂರು ಸ್ವೀಕರಿಸದಿರುವುದು, ಅಧಿಕಾರ ದುರುಪಯೋಗ, ಕಾನೂನು ಬಾಹಿರ ಬಂಧನ ಹಾಗೂ ದೌರ್ಜನ್ಯವೆಸಗುವುದು ನಡೆಸಿದ ಸಿಬ್ಬಂದಿ ಅಥವಾ ಅಧಿಕಾರಿಗಳ ವಿರುದ್ದ ಜಿಲ್ಲಾ ಮಟ್ಟದ ಪೊಲೀಸ್ ಸಮಿತಿಗೆ ಲಿಖಿತ ರೂಪದಲ್ಲಿ ಅಥವಾ ಇಮೇಲ್ ಮೂಲಕ ದೂರು ನೀಡಬಹುದು. ಇಲ್ಲಿಯೂ ನ್ಯಾಯ ದೊರಕದಿದ್ದರೆ ರಾಜ್ಯ ಮಟ್ಟದ ಪ್ರಾಧಿಕಾರಕ್ಕೆ ದೂರು ನೀಡಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಮಾತನಾಡಿ ಕಾನೂನು ಹಾಗೂ ಪರಿಹಾರ ದೊರಕುವ ಬಗ್ಗೆ ಅರಿವಿಲ್ಲದ ಕಾರಣದಿಂದ ಪರಿಹಾರ ನಿಧಿಯ ಬಳಕೆಯಾಗುತ್ತಿಲ್ಲ. ಆದ್ದರಿಂದ ದೂರು ನೀಡುವ ಸಂದರ್ಭದಲ್ಲಿಯೇ ಸಂತ್ರಸ್ಥರಿಗೆ ತಿಳುವಳಿಕೆ ನೀಡುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಪಿಪಿ ರಾಜಣ್ಣ, ವಕೀಲರಾದ ಮಧುಸೂಧನ್, ಸತ್ಯನಾರಾಯಣ್, ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ಕಾರ್ಯದರ್ಶಿ ವೆಂಕಟೇಶ್, ಪಿಎಸ್‌ಐಗಳಾದ ಬಿ.ಎಸ್.ಶಿವರುದ್ರ, ಕಿರಣ ಕುಮಾರ, ರವಿಕಿರಣ್, ಕೋರ್ಟ್ ಸಿಬ್ಬಂದಿ ಉಮೇಶ್ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: