ಮೈಸೂರು

ಪ್ರೇಕ್ಷಕರಿಗೆ ನಿರಾಸೆಯುಂಟು ಮಾಡುತ್ತಿರುವ ಮಳೆರಾಯ

ಮೈಸೂರು,ಸೆ.26:- ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರಿಗೆ ಮಳೆರಾಯ ಅಡ್ಡಿಯನ್ನುಂಟು ಮಾಡುತ್ತಿದ್ದಾನೆ.

ಸೋಮವಾರ ಸಾಯಂಕಾಲದಿಂದಲೇ ಮಳೆಯ ಆರ್ಭಟ ಜೋರಾಗಿದ್ದು, ರಾತ್ರಿಯವರೆಗೂ ಸುರಿದಿದೆ. ಸಾಯಂಕಾಲದ ವೇಳೆ ದಸರಾ ವೈಭವ ಸವಿಯಲು ಬಂದವರು ತೊಂದರೆ ಅನುಭವಿಸುವಂತಾಯಿತು. ಅಂಬಾವಿಲಾಸ ಅರಮನೆ, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತ್ ಮಹಲ್ ಪ್ಯಾಲೇಸ್, ಜಗನ್ಮೋಹನ ಅರಮನೆ ಪುರಭವನ, ಗಾನಭಾರತಿ, ಕಲಾಮಂದಿರ, ಚಲನಚಿತ್ರೋತ್ಸವ ಸೇರಿದಂತೆ ಹಲವು ಕಡೆ ನಡೆದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಕೊರತೆ ಕಂಡು ಬಂತು.

ರಾತ್ರಿ 10ರವರೆಗೂ ಮುಂದುವರಿದ ಮಳೆಯಿಂದ ಜನತೆ ಪರದಾಡುವಂತಾಗಿತ್ತು, ಮಂಗಳವಾರ ಶುಭ್ರವಾತಾವರಣ ಕಂಡು ಬಂದಿದೆ. (ಎಸ್.ಎಚ್)

Leave a Reply

comments

Related Articles

error: