ಮೈಸೂರು

ದಮನೀಯರನ್ನು ಮುಖ್ಯವಾಹಿನಿಗೆ ಕರೆತರುವ ಕಾರ್ಯಕ್ರಮಗಳಾಗಬೇಕು: ಕೆಂಪ ಹೊನ್ನಯ್ಯ

ಮೈಸೂರು, ಸೆ.೨೬: ದಸರಾ ಮಹೋತ್ಸವ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿಯಿಂದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ವಿಶಿಷ್ಟ ಕವಿಗೋಷ್ಠಿಗೆ ಕೇಂದ್ರನಾಗರಿಕ ಸೇವಾ ಪರೀಕ್ಷಾ ೩೪೦ನೇ ರ್‍ಯಾಂಕ್ ವಿಜೇತ ಕೆಂಪ ಹೊನ್ನಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಆರ್ಥಿಕ, ರಾಜಕೀಯ ಒಳಗೊಳ್ಳುವಿಕೆ ಜೊತೆಗೆ ವಿಶಿಷ್ಟ ಕವಿಗೋಷ್ಟಿಯನ್ನು ಅಯೋಜಿಸಿರುವುದು ಸಂತಸ ತಂದಿದೆ. ದಸರಾ ಮಹೋತ್ಸವ ವಿಶ್ವವಿಖ್ಯಾತಿ ಗಳಿಸಿದ್ದು, ಈ ದಸರಾ ಕವಿಗೋಷ್ಠಿ ದಸರಾ ಮಹತ್ವವವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶೇಷ ಚೇತನರು ಯಾರಿಗೂ ಕಮ್ಮಿ ಇಲ್ಲ. ಅವರಲ್ಲೂ ಪ್ರತಿಭೆ ಇದೆ. ಭಾವನೆಗಳನ್ನು ವ್ಯಕ್ತಪಡಿಸಲು ದೃಷ್ಟಿಕೋನ ಮುಖ್ಯವೇ ಹೊರತು ಅಂಗಾಂಗಳಲ್ಲ. ಸಮಾಜದ ದಮನೀಯರನ್ನು ಮುಖ್ಯವಾಹಿನಿಗೆ ಕರೆತರುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ದಮನೀಯರನ್ನು ಮುಖ್ಯವಾಹಿನಿಗೆ ತರುವ ಇಂತಹ ವೇದಿಕೆಯ ಆಶಯ ಸಾಕಾರಗೊಂಡಿದೆ. ಭಾರತವನ್ನು ಅಭಿವೃದ್ಧಿಗೊಳಿಸಲು ಡಿಜಿಟಲ್ ಇಂಡಿಯಾ, ಮೇಕಿಂಗ್ ಇಂಡಿಯಾ, ಸ್ಕಿಲ್ ಇಂಡಿಯಾದ ಅವಶ್ಯಕತೆ ಇರುವಂತೆ ಸಮಾನತೆಯ ಭಾರತ ನಿರ್ಮಾಣವಾಗಬೇಕಿದೆ. ಇದೆಲ್ಲದರ ಜೊತೆಗೆ ಸಮಾನತೆ ಭಾರತ ಬೆಳೆಯಬೇಕಿದೆ. ಆಗ ಮಾತ್ರ ಸಮಾನತೆಯ ಕನಸು ನನಸಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಕೆ.ನೀಲಾ, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: