
ಮೈಸೂರು
ಈ ಬಾರಿ ಏರ್ ಶೋ ನಡೆಯಲಿದೆ : ಡಿ.ರಂದೀಪ್
ಮೈಸೂರು,ಸೆ.26:- ಮೂರು ವರ್ಷಗಳ ಹಿಂದೆ ಮರೆಯಾಗಿದ್ದ ರ್ ಶೋ ಈ ಬಾರಿ ಮತ್ತೆ ಕಾಣಿಸಿಕೊಳ್ಳಲಿದೆ. ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ಈ ಬಾರಿ ಏರ್ ಶೋ ಗ್ಯಾರಂಟಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಂಬೂ ಸವಾರಿ ಹಿಂದಿನ ದಿನ ವಾಯು ಸೇನೆ ವಿಮಾನಗಳಿಂದ ಸಾಹಸ ಪ್ರದರ್ಶನಕ್ಕೆ ಮಾತುಕತೆ ನಡೆದಿದ್ದು ಅದು ಬಹುತೇಕ ನಡೆಯಲಿದೆ.ಗಣರಾಜ್ಯೋತ್ಸವದ ಮಾದರಿಯಲ್ಲೇ ಜಂಬೂ ಸವಾರಿ ನಡೆಸಲು ಪ್ರಯತ್ನ ನಡೆಯುತ್ತಿದೆ. ಜಂಬೂ ಸವಾರಿಯಲ್ಲಿ ಡ್ರೋಣ್ ಬಳಕೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದಿದ್ದಾರೆ. (ಆರ್.ವಿ.ಎಸ್.ಎಚ್)