ಮೈಸೂರು

ಸಿರಿಧಾನ್ಯಗಳಲ್ಲಿ ಕೋಡುಬಳೆ, ವಾಂಗಿಬಾತ್, ಡೋಕ್ಲಾ, ಕಟ್ಲೆಟ್, ದೋಸೆ ತಯಾರಿಸಿದ ಮಾಗಿದ ಕೈಗಳು

ಮೈಸೂರು, ಸೆ.26 : ಕೋಡುಬಳೆ, ಹುರಿಯಿಟ್ಟು, ಗಂಜಿ, ಬಿಸಿ ಬೇಳೆಬಾತ್, ವಾಂಗಿಬಾತ್, ಡೋಕ್ಲಾ, ಕಟ್ಲೆಟ್, ರೊಟ್ಟಿಯ ಘಮಲು ಇಡೀ ವಾತಾವರಣವನ್ನೇ ಮುದಗೊಳಿಸಿ ನೆರೆದಿದ್ದವರ ಬಾಯಿಯಲ್ಲಿ ನೀರೂರಿಸುವಂತಹ ವಾತಾವರಣವು ನಗರದ ಲಲಿತ ಮಹಲ್ ಪ್ಯಾಲೇಸ್ ಮೈದಾನದಲ್ಲಿ ಏರ್ಪಟ್ಟಿತ್ತು.

ಇವನ್ನೆಲ್ಲ ಸಾಧಾರಣವಾಗಿ ಅಕ್ಕಿ, ರವೆಯಿಂದ ತಯಾರಿಸುವುದು ಸಹಜ ಆದರೆ ಅದನ್ನು ಸಿರಿಧಾನ್ಯಗಳಲ್ಲಿ ತಯಾರಿಸುವುದು ವಿಶೇಷ ಹಾಗೂ ಆರೋಗ್ಯಕರವಾಗಿದ್ದು ಇಂತಹ ಆರೋಗ್ಯಕರ ಆಡುಗೆ ಸ್ಪರ್ಧೆಯೂ ನಗರದ ಲಲಿತ್ ಮಹಲ್ ಪ್ಯಾಲೇಸ್ ಮೈದಾನದಲ್ಲಿಂದು ಆಯೋಜಿಸಿದ್ದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 68 ವರ್ಷದ ಹಿರಿಯ ಗೌರಮ್ಮ ಸೇರಿದಂತೆ 6 ಸ್ಪರ್ಧಿಗಳು ತರೇವಾರಿ ತಿಂಡಿಗಳನ್ನು ರುಚಿಕಟ್ಟಾಗಿ ಅಧುನಿಕತೆಯ ಸ್ಪರ್ಶ ನೀಡಿ ಸಮಯದ ಮಿತಿಯಲ್ಲಿ ತಯಾರಿ ಮಾಡಿ ಹುಬ್ಬೇರಿಸುವಂತೆ ಮಾಡಿದರು.

ದಸರಾ ಆಹಾರ ಮೇಳದಲ್ಲಿಂದು ಹಿರಿಯ ಮಹಿಳೆಯರಿಗಾಗಿ ಜರುಗಿದ ಸಿರಿಧಾನ್ಯಗಳ ಸ್ಪರ್ಧೆಯಲ್ಲಿ ನಂದಿನಿ ಲೇ ಔಟ್ ನ ಹಿರಿಯ ಸ್ಪರ್ಧಿ ಗೌರಮ್ಮನವರು ಕೋಡುಬಳೆ, ಹುರಿಯಿಟ್ಟು, ಸಜ್ಜೆ ಗಂಜಿ, ರುಚಿಕರ ಪೌಷ್ಠಿಕಾಂಶದ ಹಾಲು ಸೇರಿದಂತೆ ಮಾಗಿದ ಕೈಯಲ್ಲಿ  ಕೇವಲ 1.30 ನಿಮಿಷದೊಳಗೆ 5 ವಿವಿಧ ಬಗೆಯ ಸಿರಿಧಾನ್ಯ ಆಹಾರ ತಯಾರಿಸಿದರು.

ಶಾಂತರವರು  ನವಣೆಯಿಂದ ಕಬಾಬ್, ಕೊರಲು ನಿಂದ ಡೋಕ್ಲಾ ತಯಾರಿಸಿದರು.

ಶೋಭಾ ರಾವ್ ನವಣೆ ಪಾಯಸ, ಹೆಸರು ಬೇಳೆ, ಬೀನ್ಸ್ ಬಟಾಣಿ ಬಳಸಿ ಉರಲು ಬಿಸಿಬೇಳೆ ಬಾತ್, ಅದಕ್ಕೆ ಗಾಂಧಾರಿ ಮೆಣಸು ಬಳಸಿ ಚಟ್ನಿ  ಮಾಡಿದರು

ಸಾಮೆಯಿಂದ ವಾಂಗಿಬಾತ್, ಉರಲು ಗಂಜಿ, ಮೆಂತ್ಯೆ ಮೊಳಕೆ ಕಾಳಿನ ಪಲ್ಯ, ಬಂಡಿಪಾಳ್ಯದ ಪುಷ್ಪ ಶ್ರೀನಿವಾಸ ತಯಾರಿಸಿದರು.

ನವಣೆ, ಸಾಮೆ, ಮೆಂತ್ಯ, ರಾಗಿ ಸೇರಿದಂತೆ ನವಸಿರಿಧಾನ್ಯಗಳ ರೊಟ್ಟಿ ಸೇರಿದಂತೆ 6 ಸ್ಪರ್ಧಿಗಳು 20 ಕ್ಕೂ ಅಧಿಕ ವಿವಿಧ ಬಗೆಯ ಆಹಾರವನ್ನು ತಯಾರಿಸಿದರು.ಅಚ್ಚುಕಟ್ಟಾಗಿ ಅಲಂಕಾರಿಕವಾಗಿ ಜೋಡಿಸಿದರು.

ಟಿ.ನರಸೀಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ, ಆಹಾರ ಇಲಾಖೆಯ ಜಯಮ್ಮ, ಪೊಲೀಸ್ ಇಲಾಖೆಯ ಗೀತಾ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಶಾಂತ ಪ್ರಥಮ, ಶೋಭಾ ರಾವ್ ದ್ವಿತೀಯ ಹಾಗೂ ಅನಿತಾ ಮುಕೋಟಿ ತೃತೀಯ ಸ್ಥಾನ ಪಡೆದರು.

ಇದೇ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ. ಚಿದಂಬರಂ ಮಾತನಾಡಿ ಮಕ್ಕಳು ಜಂಕ್ ಫುಡ್ ಬಿಡಿ , ಪುರಾತನ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಿ, ಖಾಯಿಲೆಗಳಿಂದ ಮುಕ್ತರಾಗಿ, ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ, ರಕ್ತದೊತ್ತಡ, ಮುಂತಾದ ಮಾರಕ ರೋಗಗಳನ್ನು ತಡೆಯಿರಿ, ಬಣ್ಣದ ಆಹಾರವನ್ನು ಬಳಸಬೇಡಿ , ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಬಳಸಿ, ಶುಚ್ಚಿತ್ವ ಕಾಪಾಡಿಕೊಳ್ಳಿ ಈ ಬಗ್ಗೆ ಜನಜಾಗೃತಿಯಾಗಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮ್ ಮೊದಲಾದವರು ಭಾಗಿಯಾಗಿದ್ದರು, ಶ್ರೀಕಂಠೇಶ್ವರ ನಿರ್ವಹಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: