ಮೈಸೂರು

ಸೆ.30ರಂದು ಹೆಲಿಕಾಪ್ಟರ್ ಹಾರಾಟ ರದ್ದು

ಮೈಸೂರು,ಸೆ.26:- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಸೆ.30ರಂದು ಜಂಬೂಸವಾರಿ ನಡೆಯಲಿದ್ದು ಆ ದಿನ ಹೆಲಿಕಾಪ್ಟರ್ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಸೆಪ್ಟೆಂಬರ್ 30 ರಂದು ಅರಮನೆ ಮೇಲೆ ಹೆಲಿಕಾಪ್ಟರ್ ಹಾರಾಟ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಸ್ಪಷ್ಟ ಪಡಿಸಿದ್ದಾರೆ. ಜಂಬೂ ಸವಾರಿ ಆನೆಗಳು ಬೆದರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಾಯು ಸೇನೆಯ ಹೆಲಿಕಾಪ್ಟರ್ ಗಳಿಂದ 29 ರಂದೇ ಪ್ರದರ್ಶನ ನಡೆಯಲಿದ್ದು, ಸೆ.30ರಂದು ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಅವು ಹೆದರುವುದರಿಂದ ಜಂಬೂ ಸವಾರಿ ದಿನ ಅರಮನೆ ಮೇಲೆ ಯಾವುದೇ ಹೆಲಿಕಾಪ್ಟರ್ ಹಾರಾಟ ನಡೆಯುವುದಿಲ್ಲ. ರದ್ದು ಮಾಡಲಾಗಿದೆ ಎಂದು ಡಿ. ರಂದೀಪ್ ಸ್ಪಷ್ಟಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: