ಮನರಂಜನೆ

1983 ರ ವಿಶ್ವಕಪ್ ಗೆಲುವು ಕುರಿತು ಬಾಲಿವುಡ್ ನಲ್ಲಿ ಸಿನಿಮಾ

ಮುಂಬೈ, ಸೆ.26: ಈಗಾಗಲೇ ಹಲವಾರು ಕ್ರೀಡಾಪಟುಗಳ ಜೀವನ ಚರಿತ್ರೆಗಳು ಸಿನಿಮಾ ರೂಪದಲ್ಲಿ ಬಂದಿದೆ. ಸದ್ಯ ಭಾರತ ತಂಡ 1983ರಲ್ಲಿ ವಿಶ್ವಕಪ್ ಗೆದ್ದಿರುವ  ಸಾಹಸಗಾಥೆಯ ಕುರಿತು ಬಾಲಿವುಡ್ ನಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ.

ಹೌದು, ಕಪೀಲ್ ದೇವ್  ನಾಯಕತ್ವದಲ್ಲಿ ಭಾರತ ತಂಡ ಕ್ರಿಕೆಟ್ ನಲ್ಲಿ ವಿಶ್ವಕಪ್ ಜಯಿಸಿತ್ತು. ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಜಯಗಳಿಸಿ ವಿಶ್ವ ಚಾಂಪಿಯನ್ ಆಗಿತ್ತು. ಆ ಸಂದರ್ಭವನ್ನು ಸಿನಿಮಾ ರೂಪದಲ್ಲಿ ತಯಾರಿಸಲಾಗುತ್ತಿದೆ. ಅಂದಹಾಗೆ ಈ ಸಿನಿಮಾವನ್ನು ಕಬೀರ್ ಖಾನ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ಕಪಿಲ್ ಪಾತ್ರವನ್ನು ನಟ ರಣವೀರ್ ಸಿಂಗ್ ಮಾಡಲಿದ್ದಾರೆ. ಈ ಹಿಂದೆ ಕಪೀಲ್ ದೇವ್ ಪಾತ್ರವನ್ನು ಅರ್ಜುನ್ ಕಪೂರ್ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಪಿಲ್ ದೇವ್ ಪಾತ್ರ ರಣವೀರ್ ಗೆ ದೊರೆತಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಶ್ವಕಪ್ ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳಿಗೆ ನೋಡಬಹುದಾಗಿದೆ. (ವರದಿ:ಎಲ್.ಜಿ)

Leave a Reply

comments

Related Articles

error: