ಮೈಸೂರು

ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಣ್ಣಿನ ಶಿಬಿರ

ಮೈಸೂರು,ಸೆ.26:- ಲಯನ್ಸ್ ಜಿಲ್ಲೆ – 317 ಎ ನ ಲಯನ್ಸ್ ಕ್ಲಬ್ ಆಫ್ ಮೈಸೂರು ನರಸಿಂಹರಾಜ ಮತ್ತು ಕರ್ನಾಟಕ ಸಿರವಿ ಸಮಾಜ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಲಷ್ಕರ್ ಮೊಹಲ್ಲಾದಲ್ಲಿರುವ ಕರ್ನಾಟಕ ಸಿರವಿ ಸಮಾಜ ಸಭಾಭವನದಲ್ಲಿ, ಉಚಿತ ರಕ್ತದೊತ್ತಡ ಪರೀಕ್ಷೆ , ಮಧುಮೇಹ ಪರೀಕ್ಷೆ, ರಕ್ತ ಗುಂಪು ಪರೀಕ್ಷೆ, ಕಣ್ಣಿನ ದೋಷ ಪರೀಕ್ಷೆ, ಕಣ್ಣಿನ ಪೊರೆ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಸಾಮಾನ್ಯ ಆರೋಗ್ಯ ಪರೀಕ್ಷೆ, ರಕ್ತದಾನ ಶಿಬಿರ, ರಕ್ತದಾನಿಗಳ ನೋಂದಣಿ ಹಾಗೂ ನೇತ್ರದಾನಿಗಳ ನೋಂದಣಿ ಸೇವೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಕರ್ನಾಟಕ ರಿಟೈರ್ಡ್ ಮೆಡಿಕಲ್ ಡಾಕ್ಟರ್ ಅಸೋಸಿಯೇಷನ್, ಮೈಸೂರು, ಐ ಸರ್ವ್ ನೇಷನ್, ಮೈಸೂರು, ಜೀವಧಾರಾ ಬ್ಲೆಡ್ ಬ್ಯಾಂಕ್ ಮೈಸೂರು, ಕೆ.ಆರ್. ಆಸ್ಪತ್ರೆ ನೇತ್ರವಿಭಾಗ, ಮೈಸೂರು ಇವರುಗಳ ಸಹ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಸಲಾಯಿತು. ಸುಮಾರು 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. 6 ಜನ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ ಲೆನ್ಸ್ ಅಳವಡಿಸಲು ಅಯ್ಕೆಯಾಗಿ ಅವರಿಗೆ ಕೆ ಆರ್. ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಯಿತು.  15 ಜನ ರಕ್ತದಾನ ಮಾಡಿದರು.  ಹಾಗೂ 37 ಜನ ನೇತ್ರದಾನ ನೋಂದಣಿಯನ್ನು ಮಾಡಿಸಿದ್ದು ಅವರಿಗೆ ನೋಂದಣಿ ಗುರುತಿನ ಚೀಟಿಯನ್ನು ನೀಡಲಾಯಿತು.  ಕಾರ್ಯಕ್ರಮದಲ್ಲಿ ರೇಣುಕುಮಾರ್. ವಿ, ಲೋಕೇಶ್. ಜೆ.ನಾಗೇಶಮೂರ್ತಿ, ಟಿ.ಎಸ್. ರವೀಂದ್ರನಾಥ್ ಹಾಗೂ ಕ್ಲಬ್ಬಿನ ಸದಸ್ಯರುಗಳು ಪಾಲ್ಗೊಂಡಿದ್ದರು. ಸಿರವಿ ಸಮಾಜದ ಕಾರ್ಯದರ್ಶಿ ಪೋಕ್‍ರಾಜ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.  (ಎಸ್.ಎಚ್)

Leave a Reply

comments

Related Articles

error: