ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಲು ಆಟಗಾರರಿಗೆ ಸೂಚನೆ ನೀಡಿದ ಕೊಯ್ಲಿ

ದೇಶ(ನವದೆಹಲಿ)ಸೆ.26:- ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಗೆಲುವನ್ನು ಪಡೆದ ನಂತರ ನಾಯಕ ವಿರಾಟ್ ಕೊಯ್ಲಿಯ ಯೋಜನೆಗಳು ಬದಲಾಗುತ್ತಿವೆ.

ಇದೀಗ ಮತ್ತೆ ಆಸ್ಟ್ರೇಲಿಯಾ ವಿರುದ್ಧ 2 ವನ್ ಡೇ, 3ಟಿ-20 ಆಟಗಳನ್ನು ಆಡಲಿಕ್ಕಿದೆ. ಇದರಿಂದ ಆಟಗಾರರು ಅವರ ವಿರುದ್ಧ ಆಟಕ್ಕೆ  ಸಂಪೂರ್ಣ ತಯಾರಿ ನಡೆಸಬೇಕು ಎಂದು ಆಟಗಾರರಿಗೆ ಹೇಳಿದ್ದಾರೆ. ಸರಣಿ ಗೆಲ್ಲುವ ಕೆಲಸ ಇಡೀ ತಂಡದ್ದಾಗಿದೆ. ಆಟಗಾರರು ಇದಕ್ಕೆ ತಯಾರಿ ನಡೆಸಬೇಕಿದೆ ಎಂದಿದ್ದಾರೆ. ಭಾರತ ತಂಡವು ಸತತ 12ಪಂದ್ಯಗಳನ್ನು ಗೆದ್ದಿದೆ. ಟಿ.20ಯಲ್ಲಿಯೂ ಕೂಡ ಭಾರತ ತಂಡವೇ ಗೆಲುವು ಸಾಧಿಸಬೇಕು ಎಂಬ ಗುರಿಯನ್ನು ಹೊಂದಿರುವ ವಿರಾಟ್ ಕೊಯ್ಲಿ ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. 2ವನ್ ಡೇ ಗಳಲ್ಲಿ ಜಡೇಜಾ ಬದಲು ಅಕ್ಷರ ಪಟೇಲ್ ಗೆ ಅವಕಾಶ ನೀಡಲಾಗಿದೆ. ಬೆಂಚ್ ಲ್ಲಿ ಕುಳಿತುಕೊಳ್ಳುವ ಆಟಗಾರರಿಗೂ ಅವಕಾಶವನ್ನು ನೀಡಬೇಕು ಎಂದು ವಿರಾಟ್ ತಿಳಿಸಿದ್ದಾರೆ. ಇದೀಗ ಹೊಸ ಟಗಾರರು ಯಾವರೀತಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. (ಎಸ್.ಎಚ್)

Leave a Reply

comments

Related Articles

error: