ದೇಶಪ್ರಮುಖ ಸುದ್ದಿವಿದೇಶ

ಅಫ್ಘಾನಿಸ್ತಾನಕ್ಕೆ ಭಾರತೀಯ ಸೇನೆ ನಿಯೋಜನೆ ಇಲ್ಲ : ನಿರ್ಮಲಾ ಸೀತಾರಾಮನ್

ನವದೆಹಲಿ, ಸೆ.26 (ಪ್ರಮುಖ ಸುದ್ದಿ): ಯುದ್ಧಪೀಡಿತ ಅಫ್ಘಾನಿಸ್ತಾನಕ್ಕೆ ಭಾರತೀಯ ಸೇನೆ ನಿಯೋಜನೆ ಸಾಧ್ಯತೆಯನ್ನು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಳ್ಳಿಹಾಕಿದ್ದಾರೆ.

ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ‍ಮ್ಯಾಟಿಸ್ ಅವರೊಡನೆ ಇಂದು ನವದೆಹಲಿಯಲ್ಲಿ ನಡೆದ ನಿಯೋಗ ಮಟ್ಟದ ಚರ್ಚೆ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಅವರು ಈ ವಿಷಯ ತಿಳಿಸಿದರು. ಆದರೆ ಅಫ್ಘಾನಿಸ್ತಾನಕ್ಕೆ ಭಾರತವು ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳನ್ನು ಮುಂದುವರಿಸಲಿದೆ ಎಂದರು.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನಿಸ್ತಾನದಲ್ಲಿ ಭಾರತ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ ಎಂದು ಕರೆ ನೀಡಿದ್ದರು. ಈ ಹೇಳಿಕೆಗೆ ಪೂರಕವಾಗಿ ಭಾರತೀಯ ಸೇನಾ ತುಕಡಿಗಳು ಅಫ್ಘಾನಿಸ್ತಾನವನ್ನು ನಿಯೋಜನೆಗೊಳ್ಳಲಿವೆ ಎಂಬ ವರದಿಗಳನ್ನು ಸಚಿವರು ಅಲ್ಲಗಳೆದರು. ಪ್ರಸ್ತುತ ಭಾರತವು ಅಫ್ಘಾನಿಸ್ತಾನಕ್ಕೆ 3 ಶತಕೋಟಿ ಯುಎಸ್ ಡಾಲರ್ ನೆರವು ನೀಡುತ್ತಿದ್ದು, ಅಲ್ಲಿನ ಸೇನೆಗೆ ತರಬೇತಿಯನ್ನೂ ನೀಡುತ್ತಿದೆ.

(ಎನ್.ಬಿ)

Leave a Reply

comments

Related Articles

error: