ನಮ್ಮೂರುಸುದ್ದಿ ಸಂಕ್ಷಿಪ್ತ

ನವೆಂಬರ್ ತಿಂಗಳ ಆಹಾರ ಅದಾಲತ್

09-1404903220-annabagya5ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ನವೆಂಬರ್ ತಿಂಗಳಲ್ಲಿ ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಹಾರ ಆದಾಲತ್ ನಡೆಯಲಿದೆ ಎಂದು ಆಹಾರ ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಅದಾಲತ್ ಅಲ್ಲಿ ಪಡಿತರ ಚೀಟಿ, ಪಡಿತರ ವಿತರಣೆ ಹಾಗೂ ಅಡುಗೆ ಅನಿಲ ಹಾಗೂ ಇತರೆ ಗ್ರಾಹಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಆಹಾರ ಅದಾಲತ್ ಗಳಲ್ಲಿ ನೀಡಿ ಪರಿಹಾರ ಕಂಡುಕೊಳ್ಳಬಹುದು.

ಸ್ಥಳ & ವಿವರ

ಕೆ.ಆರ್.ನಗರ ತಾಲೂಕು : ನ.5ರ ಬೆಳಿಗ್ಗೆ 8ಕ್ಕೆ ಕೆ.ಆರ್.ನಗರ ಪಟ್ಟಣ ಮಧುವನಹಳ್ಳಿಯ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ ಹಾಗೂ ಮಧ್ಯಾಹ್ನ 2:30ಕ್ಕೆ ವೆಂಕಟೇಶ್ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲಿ.

ಪಿರಿಯಾಪಟ್ಟಣ ತಾಲೂಕು : ನ.8ರಂದು ಬೆಳಿಗ್ಗೆ 8 ಗಂಟೆಗೆ ಪಿರಿಯಾಪಟ್ಟಣದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ ಹಾಗೂ ಮಧ್ಯಾಹ್ನ 2:30ಕ್ಕೆ ಕಿರಂಗೂರಿನಲ್ಲಿನಲ್ಲಿ ಶ್ರೀಪ್ರಕಾಶ್ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯಲಿದೆ.

ಮೈಸೂರು ನಗರ ಜೋನ್-6  ನ.24ರ ಬೆಳಿಗ್ಗೆ 8 ಗಂಟೆಗೆ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ ಹಾಗೂ ಮಧ್ಯಾಹ್ನ 2:30ಕ್ಕೆ ವಿದ್ಯಾರಣ್ಯಪುರಂನ ಸಿಲ್ಕ್ ಫ್ಯಾಕ್ಟರಿ ಹತ್ತಿರವಿರುವ ಗುರುರಾಘವೇಂದ್ರ ನ್ಯಾಯಬೆಲೆ ಅಂಗಡಿಯಲ್ಲಿ

ಹೆಚ್.ಡಿ.ಕೋಟೆ : ತಾಲೂಕಿನಲ್ಲಿ ನ.26ರಂದು ಬೆಳಿಗ್ಗೆ 8ಕ್ಕೆ ಪಟ್ಟಣ ಒಸಿಎಸ್ ನ್ಯಾಯಬೆಲೆ ಅಂಗಡಿ ಹಾಗು ಮಧ್ಯಾಹ್ನ 2:30ಕ್ಕೆ ರಾಜೇಗೌಡನ ಹುಮಡಿ ವೀರೇಗೌಡ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಅದಾಲತ್ ನಡೆಯಲಿದೆ.

Leave a Reply

comments

Related Articles

error: