ಕರ್ನಾಟಕಮೈಸೂರು

ರಾಷ್ಟ್ರೀಯ ನಾಟಕೋತ್ಸವಕ್ಕೆ ‘ನಟನ’ದ ಎರಡು ನಾಟಕಗಳು

chaamachaluve-sanehalli03-webyugantara03-webdsc_1075-webಮೈಸೂರು: ‘ನಟನ’ ರಂಗ ಶಾಲೆಯ ಎರಡು ನಾಟಕಗಳು ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಪ್ರದರ್ಶನಗೊಳ್ಳಲಿವೆ.

ನವೆಂಬರ್ 8 ರಂದು ನಡೆಯುವ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮಧ್ಯಾಹ್ನ 2.30ಕ್ಕೆ ಮಂಡ್ಯರಮೇಶ್ ನಿರ್ದೇಶನದ ಡಾ|| ಸುಜಾತಾ ಅಕ್ಕಿ ಅವರ ‘ಚಾಮ ಚಲುವೆ’ ನಾಕಟ ಪ್ರದರ್ಶನಗೊಳ್ಳಲಿದೆ.

ಬೆಂಗಳೂರಿನ ‘ರಂಗ ಶಂಕರ’ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ನವೆಂಬರ್ 9, ಸಂಜೆ 7.30 ಕ್ಕೆ ಮಂಜುನಾಥ್‌ ಎಲ್. ಬಡಿಗೇರ ಅವರ ನಿರ್ದೇಶನದಲ್ಲಿ ವಿ.ಕೃ. ಗೋಕಾಕರ ಯುಗಾಂತರ ನಾಟಕ ಪ್ರದರ್ಶನಗೊಳ್ಳಲಿದೆ.

ಪೂರ್ವಭಾವಿಯಾಗಿ ನವೆಂಬರ್ 6 ರಂದು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ‘ನಟನ’ ರಂಗಶಾಲೆಯಲ್ಲಿ ಯುಗಾಂತರ ನಾಟಕದ ಪ್ರಥಮ ಪ್ರಯೋಗವನ್ನು ಸಂಜೆ 6.30ಕ್ಕೆ ಆಯೋಜಿಸಲಾಗಿದೆ. ರಂಗಾಸಕ್ತರು ಪಾಲ್ಗೊಳ್ಳಬಹುದು ಎಂದು ‘ನಟನ’ ತಿಳಿಸಿದೆ.

ಮಾಹಿತಿಗಾಗಿ 99455 55570, 94804 69327 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಮಂಡ್ಯ ರಮೇಶ್ ನೇತೃತ್ವದ ‘ನಟನ’ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನಶೀಲವಾಗಿದೆ.

Leave a Reply

comments

Related Articles

error: