ಸುದ್ದಿ ಸಂಕ್ಷಿಪ್ತ

ಜಂಬೂ ಸವಾರಿ ವೀಕ್ಷಿಸಲು ವಿದೇಶಿಗರಿಗೆ ವಿಶೇಷ ವ್ಯವಸ್ಥೆ

ಮೈಸೂರ,ಸೆ.26 : ಕಲ್ಪವೃಕ್ಷ ಟ್ರಸ್ಟ್ ಯಾವುದೇ ಅಡಚಣೆ ಇಲ್ಲದೇ ವಿದೇಶಿಗರು ದಸರಾ ಜಂಬೂ ಸವಾರಿ ವೀಕ್ಷಿಸಲು ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಕಾಲೇಜಿನ ಫುಟ್ ಪಾತ್ ಮುಂಭಾಗ ಸಂಸ್ಥೆಯು ಸ್ವಂತ ಖರ್ಚಿನಲ್ಲಿ ಶಾಮಿಯಾನ ಹಾಗೂ ಕುರ್ಚಿ ವ್ಯವಸ್ಥೆ ಮಾಡಲಿದೆ.

ಅಲ್ಲದೇ ಅವರಿಗೆ ಉಚಿತ ಕುಡಿಯುವ ನೀರು, ಬಿಸ್ಕತ್ ಕೊಟ್ಟು ಅತಿಥ್ಯ ನೀಡಿ ನಮ್ಮ ಸಂಸ್ಕೃತಿ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಯತ್ನಿಸಲಾಗುತ್ತಿದ್ದು ಕಳೆದ 5 ವರ್ಷಗಳಿಂದಲೂ ನಿರಂತರವಾಗಿ ಈ ಸೇವೆಯನ್ನು ಸಂಸ್ಥೆಯಿಂದ ನಡೆಸಲಾಗುತ್ತಿದ್ದು ವಿದೇಶಿಗರಿಗೆ ಉಚಿತ ಪಾಸುಗಳನ್ನು ಪಡೆದುಕೊಳ್ಳಬಹುದು. ಮಾಹಿತಿಗಾಗಿ ಮೊ.ನಂ. 91648 3773, 9480939152, ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: