ಕರ್ನಾಟಕಮೈಸೂರು

ಶಾಂತಿ ಮತ್ತು ಮಾನವೀಯತೆ ಅಭಿಯಾನ: ಬಹುಭಾಷಾ ಕವಿಗೋಷ್ಠಿ

ಸಮಾಜದಲ್ಲಿ ಶಾಂತಿ ಮತ್ತು ಮಾನವೀಯ ಗುಣಗಳನ್ನು ಪ್ರೇರೇಪಿಸಲು ‘ಶಾಂತಿ ಮತ್ತು ಮಾನವೀಯತೆ ಅಭಿಯಾನ’ದಿಂದ ರಾಷ್ಟ್ರವ್ಯಾಪ್ತಿ ಅಭಿಯಾನವು ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರವರೆಗೆ ಜರುಗಿತು.

ಈ ನಿಟ್ಟಿನಲ್ಲಿ ಸೆ. 3ರಂದು ನಗರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಉದ್ಘಾಟನೆ ಪ್ರೊ.ಶಿವರಾಜಪ್ವ ನೆರವೇರಿಸಿದರು, ಅಧ್ಯಕ್ಷತೆ ಸೇತುರಾಮ್ ವಹಿಸಿದ್ದರು, ಶ್ರೀ ಬಸವಲಿಂಗ ಮೂರ್ತಿ ಶರಣರು ಸಾನಿಧ್ಯ ವಹಿಸಿದ್ದರು,  ಮುಖ್ಯ ಅತಿಥಿಗಳಾಗಿ ಬನ್ನೂರು ಕೆ.ರಾಜು ಹಾಗೂ ಕನ್ನಡ ಉರ್ದು, ಹಿಂದಿ ಭಾಷಾ ಕವಿಗಳು ಉಪಸ್ಥಿತರಿದ್ದರು. ಗೋಷ್ಠಿಯಲ್ಲಿ ಕನ್ನಡ, ಉರ್ದು ಮತ್ತು ಇತರ ಭಾಷೆಗಳಲ್ಲಿ  ಕವನಗಳ ಮೂಲಕ ಶಾಂತಿ ಮತ್ತು ಮಾನವೀಯತೆ ಸಂದೇಶ ನೀಡಿದರು.

ಮಕ್ಕಳ ಜಾಥಾ: ಸಂಘಟನೆಯಿಂದ ಕಳೆದ ಸೆಪ್ಟೆಂಬರ್ 3ರಂದು ಬೆಳಿಗ್ಗೆ 10:30ಕ್ಕೆ ಮಕ್ಕಳಿಂದ ಜಾಥಾ ನಡೆಯಿತು. ನಗರದ ಟೌನ್ ಹಾಲ್ ನಿಂದ ಹೊರಟು ಗಾಂಧಿ ಚೌಕದ ಮೂಲಕ ದೇವರಾಜು ಅರಸು ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರಿ ವಿವಿಧ ಪಕ್ಷಗಳು ಮುಖಂಡರುಗಳೊಂದಿಗೆ ದೇಶದಲ್ಲಿ ಶಾಂತಿ ಹಾಗೂ ಮಾನವೀಯತೆ ನೆಲೆಸುಲು ಪ್ರತಿಜ್ಞೆ ಮಾಡಲಾಯಿತು. ಆ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಅಭಿಯಾನದ ಉದ್ದೇಶಗಳು: ಕೋಮು ಪ್ರಚೋದನೆ ಮತ್ತು ಉದ್ರೇಕಕಾರಿ ಭಾಷಣ ಮಾಡುವ ಜನಪ್ರತಿನಿಧಿಗಳನ್ನು ಬಂಧಿಸಿ ಅನರ್ಹಗೊಳಿಸಲು ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತರಬೇಕು. ಕೋಮುಗಲಭೆ ಸಂತ್ರಸ್ಥರಿಗಿ ಪರಿಹಾರ-ರಕ್ಷಣೆ. ಅಲ್ಪಸಂಖ್ಯಾತ, ದಲಿತ ಮತ್ತು ಆದಿವಾಸಿ ವರ್ಗಗಳಲ್ಲಿ ಭದ್ರತೆಯ ಭಾವನೆ ಮೂಡಿಸಬೆಕು. ಪ್ರಧಾನಿ ಮೋದಿಯವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೇಳಿದಂತೆ ಧಾರ್ಮಿಕ ಮತ್ತು ಜಾತೀಯ ಉದ್ವಿಗ್ನತೆಗಳು ಸಾಮಾಜಿಕ ಸಾಮರಸ್ಯವನ್ನು ಕೆಡಿಸುವಂಥವು. ಇಂತಹ ಪಿಡುಗುಗಳ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಎಲ್ಲ ಸುಧಾರಣಾ ಕ್ರಮಗಳಿಗೆ ನಮ್ಮ ಬೆಂಬಲವಿದೆ ಎಂದು ‘ಶಾಂತಿ ಮತ್ತು ಮಾನವೀಯತೆ ಅಭಿಯಾನ’ದ ಸದಸ್ಯರು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Leave a Reply

comments

Related Articles

error: