ಮೈಸೂರು

ವನ್ಯ ಮೃಗ-ಮಾನವ ಸಂಘರ್ಷ ತಡೆಯಲು ಪ್ರಯತ್ನ: ರಮಾನಾಥ್ ರೈ

ಮೈಸೂರು, ಸೆ.೨೬: ನಾಡಹಬ್ಬ, ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ರೂವಾರಿಗಳಾದ ಆನೆ ಮಾವುತರು ಮತ್ತು ಕಾವಾಡಿಗಳನ್ನು ಅರಣ್ಯ ಇಲಾಖೆ ವತಿಯಿಂದ ಸನ್ಮಾನಿಸಿ ಸಮವಸ್ತ್ರ ಮತ್ತು ಉಪಯುಕ್ತ ವಸ್ತುಗಳ ಕಿಡ್‌ಗಳನ್ನು ವಿತರಿಸಲಾಯಿತು.
ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ಸನ್ಮಾನಿಸಿ, ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಆನೆಗಳು ಹಾಗೂ ಮಾವುತರು, ಕಾವಾಡಿಗಳ ಪಾತ್ರ ಮುಖ್ಯವಾದದ್ದು. ವನ್ಯಜೀವಿ ಸಂರಕ್ಷಣೆಯ ಮಹತ್ವ ತಿಳಿಸಲಾಗುತ್ತಿದೆ. ನಮ್ಮ ರಾಜ್ಯ ಹೆಚ್ಚು ಆನೆಗಳು, ಹುಲಿಗಳು, ಸಿಂಗಳಿಕ ಹಾಗೂ ಚಿರತೆಗಳಿರುವ ರಾಜ್ಯವಾಗಿದೆ. ಇಲಾಖೆ ವನ್ಯ ಮೃಗ-ಮಾನವ ಸಂಘರ್ಷ ತಡೆಯಲು ಪ್ರಯತ್ನಗಳು ಸಾಗಿದೆ ಎಂದು ತಿಳಿಸಿದರು.
ಬಳಿಕ ಸಚಿವರು ಅರಮನೆಯಿಂದ ವಸ್ತು ಪ್ರದರ್ಶನಕ್ಕೆ ತೆರಳಿ ಅರಣ್ಯ ಇಲಾಖೆಯ ಮಳಿಗೆ ವೀಕ್ಷಿಸಿದರು.
ಈ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಪಿಸಿಸಿಎಫ್ ಪೊನ್ನಟ್ಟಿ ಶ್ರೀಧರ್, ಎಪಿಸಿಸಿಎಫ್ ವನ್ಯಜೀವಿ ವಿಭಾಗದ ಜಯರಾಮ್, ಸಿಸಿಎಫ್ ಕರುಣಾಕರ್, ಡಿಸಿಎಫ್‌ಗಳಾದ ಯೆಡುಕುಂಡಲು, ಹನುಮಂತಪ್ಪ, ಆನೆ ವೈದ್ಯಾಧಿಕಾರಿ ನಾಗರಾಜ್, ಆರ್‌ಎಫ್‌ಒ ದೇವರಾಜು ಮತ್ತು ರಾಜೇಶ್ವರಿ ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: