ಮೈಸೂರು

ಬಿಎಸ್‍ಎನ್‍ಎಲ್‍ ಎಂಪ್ಲಾಯಿಸ್ ಯೂನಿಯನ್‍ನ ಎರಡು ದಿನಗಳ 6ನೇ ಕರ್ನಾಟಕ ವಲಯ ಸಮ್ಮೇಳನ

ಹಲವು ವರ್ಷಗಳ ಹಿಂದೆ ಹಿಂದುಳಿದಿದ್ದ ಯೂನಿಯನ್‍ನ ಕರ್ನಾಟಕ ವಲಯ ಇಂದು ದೇಶದ ಅತ್ಯುತ್ತಮ ಸಂಘಟನೆಯಾಗಿ ಬೆಳೆದಿದೆ ಎಂದು ಬಿಎಸ್‍ಎನ್‍ಎಲ್‍ ಎಂಪ್ಲಾಯಿಸ್ ಯೂನಿಯನ್‍ನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಅಭಿಮನ್ಯು ಶ್ಲಾಘಿಸಿದರು.

ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಬಿಎಸ್‍ಎನ್‍ಎಲ್‍ ಆರ್‍ಟಿಟಿಸಿ ಸಭಾಂಗಣದಲ್ಲಿ ಬಿಎಸ್‍ಎನ್‍ಎಲ್‍ ಎಂಪ್ಲಾಯಿಸ್ ಯೂನಿಯನ್‍ನ ಎರಡು ದಿನಗಳ 6ನೇ ಕರ್ನಾಟಕ ವಲಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ವಲಯ ಯಾವುದೇ ಹೋರಾಟದಲ್ಲಿ ಶೇ.80ರಷ್ಟು ಸಕ್ರಿಯವಾಗಿ ಭಾಗಿಯಾಗುತ್ತಾ ಬಂದಿರುವ ಬಗ್ಗೆ ಅಭಿನಂದಿಸಿ, ಬಿಎಸ್‍ಎನ್‍ಎಲ್‍ ಎಂಪ್ಲಾಯಿಸ್ ಯೂನಿಯನ್ ಕೇವಲ ಕಾರ್ಮಿಕ ಸಂಘಟನೆಯಷ್ಟೇ ಅಲ್ಲ. ಇದೊಂದು ಕಾರ್ಮಿಕ ಚಳುವಳಿ. ನಮ್ಮ ಚಳುವಳಿ ಕೇವಲ ನಮ್ಮ ವೇತನ, ಲಾಭ, ನಷ್ಟ, ವರ್ಗಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ್ದಲ್ಲ. ನೌಕರರ ಜವಾಬ್ದಾರಿ, ಸೇವೆಗಳ ಬಗ್ಗೆಯೂ ತಿಳುವಳಿಕೆ ಮೂಡಿಸುವ ಚಳುವಳಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಬಿಎಸ್‍ಎನ್‍ಎಲ್‍ ಎಂಪ್ಲಾಯಿಸ್ ಯೂನಿಯನ್ 6ನೇ ಕರ್ನಾಟಕ ವಲಯ ಅಧ್ಯಕ್ಷ ಬಿ.ಪಿ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಯೂನಿಯನ್‍ನ ಕೇಂದ್ರ ಸಮಿತಿ ಘೋಷಕ ವಿ.ಎ.ಎನ್. ನಂಬೂದಿರಿ, ಸಹಾಯಕ ಪ್ರಧಾನ ಕಾರ್ಯದರ್ಶಿ ಎಂ.ಸಿ. ಬಾಲಕೃಷ್ಣ, ಸ್ವಾಗತ ಸಮಿತಿ ಉಪಾಧ್ಯಕ್ಷ ಮೈಸೂರು ಜಿಲ್ಲಾಧ್ಯಕ್ಷ ಎನ್‍. ಬಸವರಾಜು, ಜಿಲ್ಲಾ ಕಾರ್ಯದರ್ಶಿ ಎಂ. ಮಹದೇವಪ್ಪ ಮತ್ತು ಇತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: