ಕರ್ನಾಟಕ

ಕ್ರೀಡಾಕೂಟಗಳು ಆರೋಗ್ಯ ಸಂರಕ್ಷಣೆಗೆ ಸಹಕಾರಿ : ಎಸ್‍ಪಿ ರಾಜೇಂದ್ರಪ್ರಸಾದ್ ಅಭಿಪ್ರಾಯ

ರಾಜ್ಯ(ಮಡಿಕೇರಿ) ಸೆ.26 :-ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು.

ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ನಡುವಿನ ಪ್ರದರ್ಶನ ಪಂದ್ಯವನ್ನು ರೈಡ್ ಮಾಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮತ್ತು ಡಿವೈಎಸ್‍ಪಿ ಸುಂದರರಾಜ್ ಉದ್ಘಾಟಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಎಸ್‍ಪಿ ರಾಜೇಂದ್ರ ಪ್ರಸಾದ್ ಮಾತನಾಡಿ,  ಕ್ರೀಡಾಚಟುವಟಿಕೆಗಳು ಕೇವಲ ಮನೋರಂಜನೆಗಷ್ಟೆ ಸೀಮಿತವಲ್ಲ. ಬದಲಾಗಿ, ಆರೋಗ್ಯ ಸಂರಕ್ಷಣೆಗೆ ಪೂರಕವಾಗಿದೆ. ಪ್ರತಿಯೊಬ್ಬರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಕ್ರೀಡೆ ಮತ್ತು ಬದುಕು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡಾ ಚಟುವಟಿಕೆಗಳಲ್ಲಿನ ಕ್ರೀಡಾಸ್ಫೂರ್ತಿಯನ್ನು ಬದುಕಿನಲ್ಲೂ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಿಸಿ, ಪಂದ್ಯಾವಳಿಯ ಯಶಸ್ಸಿಗೆ ಶುಭ ಕೋರಿದರು. ವೇದಿಕೆಯಲ್ಲಿ ನಗರಸಭಾ ಆಯುಕ್ತರಾದ ಶುಭಾ, ಕೇಶವ ಪ್ರಸಾದ್ ಮುಳಿಯ, ಪ್ರಸನ್ನ ಭಟ್, ಮುಹಮ್ಮದ್ ನಾಸಿರ್, ಪ್ರಸಾದ್, ಉತ್ತಪ್ಪ ಉಪಸ್ಥಿತರಿದ್ದರು.

ಪಂದ್ಯಾವಳಿಯ ಆರಂಭದಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡವು 21-6 ಅಂಕಗಳಿಂದ ಕೊಡಗು ಜಿಲ್ಲಾ ಪತ್ರಕರ್ತರ ತಂಡವನ್ನು ಮಣಿಸಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: