ಸುದ್ದಿ ಸಂಕ್ಷಿಪ್ತ

ಮದ್ಯದಂಗಡಿಗೆ ವಿರೋಧ : ಪ್ರತಿಭಟನೆಯ ಎಚ್ಚರಿಕೆ

ರಾಜ್ಯ(ಮಡಿಕೇರಿ) ಸೆ.26 :-ಈಗಾಗಲೇ ಎರಡು ಮದ್ಯದಂಗಡಿಗಳನ್ನು ಹೊಂದಿರುವ ಪಾಲಿಬೆಟ್ಟ ಗ್ರಾಮದಲ್ಲಿ ಮತ್ತೊಂದು ಮದ್ಯದ ಅಂಗಡಿ ತೆರೆಯಲು ಅನುಮತಿಯನ್ನು ನೀಡಿದ್ದು, ಇದರ ವಿರುದ್ಧ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಾಲಿಬೆಟ್ಟ ನಾಗರಿಕ ಒಕ್ಕೂಟ ಎಚ್ಚರಿಕೆ ನೀಡಿದೆ.

ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಸಂಚಾಲಕರಾದ ಎಂ.ಎಸ್. ಮುಹಮ್ಮದ್ ಶಮೀಲ್ ಹಾಗೂ ಸದಸ್ಯರಾದ ಕೆ.ಎ.ಅಬ್ದುಲ್ ರಶೀದ್, ಪಾಲಿಬೆಟ್ಟ ಗ್ರಾಮದ ಜನವಸತಿ ಪ್ರದೇಶದಲ್ಲಿ ಈಗಾಗಲೇ ಎರಡು ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಮತ್ತೆ ಮುಖ್ಯ ರಸ್ತೆಯಲ್ಲೇ ಮತ್ತೊಂದು ಮದ್ಯದಂಗಡಿಗೆ ಅಬಕಾರಿ ಇಲಾಖೆ ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ.

ಈಗಿರುವ ಮದ್ಯದಂಗಡಿಗಳಿಂದಲೇ ಗ್ರಾಮಸ್ಥರ ನೆಮ್ಮದಿಗೆ ಭಂಗವಾಗಿದ್ದು, ಮುಖ್ಯ ರಸ್ತೆಯಲ್ಲಿ ಮತ್ತೊಂದು ಅಂಗಡಿ ಆರಂಭಗೊಂಡರೆ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರ ನಿತ್ಯ ಓಡಾಟಕ್ಕೆ ತೊಂದರೆಯಾಗಲಿದೆ. ಅಲ್ಲದೆ ಗ್ರಾಮದಲ್ಲಿ ಅಶಿಸ್ತಿನ ವಾತಾವರಣ ಹೆಚ್ಚಾಗಲಿದೆ ಎಂದು ಮುಹಮ್ಮದ್ ಶಮೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

(ಕೆಸಿಐ,ಎಸ್.ಎಚ್)

Leave a Reply

comments

Related Articles

error: