ಕರ್ನಾಟಕ

ಗಾಲಿ ಕುರ್ಚಿ ವಿತರಣೆ

ರಾಜ್ಯ(ಮಡಿಕೇರಿ)ಸೆ.26:-ಉದ್ಯಮಿ ಹಾಗು ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಅಂಗವಿಲಕರೊಬ್ಬರಿಗೆ ಉಚಿತವಾಗಿ ಗಾಲಿ ಕುರ್ಚಿ ವಿತರಿಸಿದರು.

ಸೋಮವಾರಪೇಟೆ  ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲನಿಯ ಅಂಗವಿಕಲರಾದ ಕಾರ್ಯಪ್ಪ ಅವರು ಉಚಿತವಾಗಿ ಸೌಲಭ್ಯ ಸ್ವೀಕರಿಸಿದರು. ಅಂಗವಿಕಲತೆ ಶಾಪವಲ್ಲ. ಅಂಗವಿಕಲರ ಬಗ್ಗೆ ಅನುಕಂಪದೊಂದಿಗೆ ಸಹಾಯವನ್ನು ಮಾಡಬೇಕು ಎಂದು ರವೀಂದ್ರ ಅವರು ಆಶಿಸಿದರು. ಈ ಸಂದರ್ಭ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಕಿರಣ್ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: