ಮೈಸೂರು

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶ ಪ್ರಗತಿಯಲ್ಲಿ: ಪ್ರೊ. ಕೆ.ಎಸ್. ರಂಗಪ್ಪ

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶ ಪ್ರಗತಿಯಲ್ಲಿದ್ದು, ಕಂಪ್ಯೂಟರ್ ಬಳಕೆಯಲ್ಲಿ ಭಾರತ ಮುಂದಿದೆ ಎಂದು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.

ಮೈಸೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಅಲ್ಯಮಿನಿ ಅಸೋಸಿಯೇಷನ್‍ನಿಂದ ನಡೆದ ಸಾಫ್ಟ್‍ವೇರ್ ಕಂಪ್ಯೂಟರ್ ತಂತ್ರಗಳ ಮಾದರಿ ಗುರುತಿಸುವಿಕೆ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಂಪ್ಯೂಟರ್ ವಿಜ್ಞಾನದಿಂದ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಾಗಿದ್ದು, ದೇಶದ ಸಾಫ್ಟ್‍ವೇರ್‍ ಉದ್ಯೋಗಿಗಳು ಹೊರದೇಶಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಮಾನವನ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಂಆರ್‍ಐ ಸ್ಕ್ಯಾನಿಂಗ್ ಹಾಗೂ ರೇಡಿಯಾಲಜಿಗಳಂತಹ ವೈಜ್ಞಾನಿಕ ಪ್ರಯೋಗ ಮತ್ತು ರೋಗ ಪತ್ತೆ ವಿಧಾನಕ್ಕೆ ಹೆಚ್ಚು ಉಪಯೋಗವಾಗಿದೆ ಎಂದರು.

ಬೆಂಗಳೂರಿನ ಫಿಲಿಪ್ಸ್ ಭಾರತೀಯ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಎಂ.ಎಸ್. ದಿನೇಶ್, ಡಿಓಎಸ್ ಕಂಪ್ಯೂಟರ್ ಸೈನ್ಸ್ ನ ಅಧ್ಯಕ್ಷ ಡಾ.ಡಿ.ಎಸ್. ಗುರು, ಪ್ರಾಧ್ಯಾಪಕ ಡಾ.ಪಿ.ನಾಗಭೂಷಣ್ ಮತ್ತು ಜಿ.ಹೇಮಂತ್ ಕುಮಾರ್ ಇದ್ದರು.

Leave a Reply

comments

Related Articles

error: