ಮೈಸೂರು

ಯುವದಸರಾಕ್ಕೆ ತೆರಳುವ ಜನತೆಗೆ ಅಡ್ಡಿಪಡಿಸಿದ ಮಳೆರಾಯ: ದಿವ್ಯಾ ಕುಮಾರ್ ಗೀತೆ ಕೇಳಲು ಪ್ರೇಕ್ಷಕರ ಕೊರತೆ

ಮೈಸೂರು,ಸೆ.27-ಕಳೆದ ಎರಡು ದಿನಗಳಿಂದ ಸಂಜೆ ವೇಳೆಯಾಗುತ್ತಿದ್ದಂತೆ ಸುರಿಯುತ್ತಿರುವ ಮಳೆಯು ಮಂಗಳವಾರ ಯುವ ದಸರಾದ ಐದನೇ ದಿನದ ಕಾರ್ಯಕ್ರಮಕ್ಕೆ ಅಡ್ಡಿಯನ್ನುಂಟು ಮಾಡಿತ್ತು. ಮಳೆಯಿಂದಾಗಿ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕೊರತೆ ಕಂಡು ಬಂತು.
ಐದನೇ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್ ಯೂತ್ಸ್ ನ ದಿವ್ಯಾ ಕುಮಾರ್ ಮತ್ತು ಶಿಫಾಲಿ ಬಾಲಿವುಡ್ ನ ಪ್ರಸಿದ್ಧ ಗೀತೆಗಳನ್ನು ಹಾಡಿ ಯುವ ದಸರಾದಲ್ಲಿದ್ದ ಬೆರಳಣಿಕೆಯಷ್ಟು ಪ್ರೇಕ್ಷಕರನ್ನು ರಂಜಿಸಿದರು.

ದಿವ್ಯಾ ಕುಮಾರ್ ಶೆಯೇನಾಯಿ, ಕಾಮೋಶಿಯಾ, ಸೂಫಿ ಗೀತೆಗಳಾದ ತೇರಿ ನಾಮ್ ಸೇ ಜಿಲೂ ತೇರಿ ನಾಮ್ ಸೇ ಮರ್ ಜಾವೂ, ತೇರೆ ಬಿನ್ ನಯೀ ಲಗತ್ತಾ, ಮನ್ ಮಸ್ತ್ ಮದನ್, ಅಲ್ಫು ಅಲ್ಲಾ , ಅಲ್ಫು ಅಲ್ಲಾ ಹು, ಇಶಕ್ ಜ್ಯಾದೆ, ಅಫಾತೋನ್ ಕೆ ಪರೀಂದೆ, ಲಕ್ನೋ ಸೆಂಟರ್ ಚಿತ್ರದ ಓ ರಬ್ಬಾ ರಬ್ಬಾ ಶುಕರ್ ತೇರಾ‌, ಬಾಗ ಮಿಕಾ ಬಾಗ್ ಚಿತ್ರದ ಹವನ್ ಕರೇಂಗೆ ಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಇನ್ನು ಮೈಸೂರಿನ ಯುವತಿ ಕೋಮಲ್ ದಿವ್ಯಾಕುಮಾರ್ ಅವರೊಂದಿಗೆ ಎಬಿಸಿಡಿ ೨ ಚಿತ್ರದ ಸುನ್ ಸಾಥಿಯಾ ಹಾಡಿಗೆ ಜೊತೆಯಾದರು. (ವರದಿ-ಎಂ.ಎನ್)

Leave a Reply

comments

Related Articles

error: