ಪ್ರಮುಖ ಸುದ್ದಿ

ಅವ್ಯವಸ್ಥೆಗಳ ಗೂಡಾಡ ನರಸೀಪುರ ಮಿನಿ ವಿಧಾನ ಸೌಧ

ಪ್ರಮುಖ ಸುದ್ದಿ, ತಿ.ನರಸೀಪುರ, ಸೆ.೨೭: ಹೊರ ನೋಟ ಬಲು ಸುಂದರ ಒಳ ಒಕ್ಕರೆ ಕಳೆಪೆ ಕಾಮಗಾರಿಯ ಕರ್ಮಕಾಂಡದ ದರ್ಶನ. ಅವೈಜ್ಞಾನಿಕ ಕಟ್ಟಡ ನಿರ್ಮಾಣ. ಹೀಗೆ ಹಲವು ಅವ್ಯವಸ್ಥೆಗಳ ಚಿತ್ರಣ ಒಂದೊಂದಾಗಿ ಬಿಚ್ಚಿಕೊಳ್ಳಲಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೊಪಯೋಗಿ ಸಚಿವರು ಪ್ರತಿನಿಧಿಸುವ ತಿ.ನರಸೀಪುರದ ಮಿನಿ ವಿಧಾನ ಸೌಧದ ಅವ್ಯವಸ್ಥೆಯ ಕತೆ
ಪಟ್ಟಣದಲ್ಲಿ ನೂತನವಾಗಿ ನಿರ್ಮಿತವಾಗಿ ಇತ್ತೀಚಿಗೆ ಉದ್ಘಾಟನೆಗೊಂಡ ಮಿನಿ ವಿಧಾನ ಸೌಧ ಕಟ್ಟಡ ಅಧಿಕಾರಿಗಳ ನಿರ್ಲಕ್ಷ್ಯತನ ಭ್ರಷ್ಟಾಚಾರ ಹಾಗೂ ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಇಡಿದ ಕೈ ಗನ್ನಡಿಯಾಗಿದೆ. ಇಂತಹ ಅವ್ಯವಸ್ಥೆ ಅಕ್ರಮ ಮುಖ್ಯ ಮಂತ್ರಿಗಳು ಹಾಗೂ ಲೋಕೊಪಯೋಗಿ ಸಚಿವರ ಕ್ಷೇತ್ರದಲ್ಲೆ ನಿರ್ಮಾಣವಾದರೆ ಉಳಿದ ತಾಲೂಕುಗಳ ಗತಿಯೇನು ಎನ್ನುವಂತಾಗಿದೆ. ಮಳೆ ಬಂದರೆ ಕಚೇರಿ ಸುತ್ತಾ ನೀರು ಶೇಖರಣೆ ಗೊಳ್ಳುತ್ತದೆ. ನೆಲ ಅಂತಸ್ತಿನಲ್ಲಿ ಎರಡು ಅಡಿಯಷ್ಟು ಮಳೆಯ ನೀರು ನಿಲ್ಲುತ್ತಿದೆ. ಸಿಬ್ಬಂದಿ ಹಾಗೂ ಸಾರ್ವಜನಿಕರು ಕಚೇರಿ ಪ್ರವೇಶಿಸಲು ದುಸ್ಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಳವಡಿಸುವ ವೆಟ್ರಿಫೈಡ್(ನೆಲಹಾಸು) ಮೂರು ತಿಂಗಳಲ್ಲೆ ಕಿತ್ತು ಮೇಲೆ ಬರುತ್ತಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸುಸಜ್ಜಿತ ಒಳ ಚರಂಡಿ ವ್ಯವಸ್ಥೆ ಸಹ ಇಲ್ಲಾ. ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ತೆರಳಲು ನಿರ್ಮಿಸಿರುವ ಮೆಟ್ಟಿಲುಗಳು ಮಳೆಯ ನೀರಿನಿಂದ ರಕ್ಷಣೆ ಇಲ್ಲದ ಕಾರಣ ಮಳೆಯ ನೀರಿನಲ್ಲಿ ನೆನೆದು ಓಡಾಡಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲಾ. ಶೌಚಾಲಯವಿದ್ದರು ಅಧಿಕಾರಿಗಳು ಬೀಗ ಜಡಿದು ಸಾರ್ವಜನಿಕರ ಅನುಕೂಲಕ್ಕೆ ಬಾರದಂತೆ ಮಾಡಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆಗಳನ್ನು ಹೊದ್ದು ಮಲಗಿರುವ ಮಿನಿ ವಿಧಾನಸೌಧವನ್ನು ಯಾವ ಪುರುಷಾರ್ಥಕ್ಕಾಗಿ ನಿರ್ಮಿಸಿದ್ದಾರೆ ಎಂದು ಜನರು ಪ್ರಶ್ನಿಸುವಂತಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: