ಪ್ರಮುಖ ಸುದ್ದಿ

ಮಾವತ್ತೂರು ಡ್ಯಾಂಗೆ ಬಾಗೀನ ಅರ್ಪಿಸಿದ ಡಿಕೆ ಶಿವಕುಮಾರ್

ಪ್ರಮುಖ ಸುದ್ದಿ, ಕನಕಪುರ, ಸೆ.೨೭: ರಾಮನಗರ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಹೆಚ್ಚು ಮಳೆ ಬಿದ್ದಿರುವುದಾಗಿ ಸರ್ಕಾರಕ್ಕೆ ವರದಿ ಬಂದಿದ್ದು ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಚಾಕನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮಾವತ್ತೂರು ಡ್ಯಾಂಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕನಕಪುರ ಕ್ಷೇತ್ರ ವಿಂಗಡಣೆಗೊಂಡು ಹತ್ತು ವರ್ಷ ಕಳೆದಿವೆ. ಕ್ಷೇತ್ರದ ಜನತೆ ನಮ್ಮಲ್ಲಿ ಬಹು ನಿರೀಕ್ಷೆಯಿಟ್ಟು ಅತ್ಯಂತ ಬಹುಮತದಿಂದ ಆರಿಸಿದ ಹಿನ್ನೆಲೆಯಲ್ಲಿ ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ೨ ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅದನ್ನು ಜನರ ಮುಂದೆ ಸಾಕಾರಗೊಳಿಸಿzವೆ. ತಾಲೂಕಿನ ಎಲ್ಲಾ ರಸ್ತೆ ಅಭಿವೃದ್ಧಿ, ತಾಲೂಕು ಕಚೇರಿ, ಕಚೇರಿ ಸಂಕೀರ್ಣ, ನಗರಸಭಾ ಕಟ್ಟಡ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹಾಯಿಸುವ ಯೋಜನೆಗಳಿಗೆ ಮಂಜೂರಾತಿ ದೊರೆತು ಕಾಮಗಾರಿ ಪ್ರಗತಿಯಲ್ಲಿರುವುದಾಗಿ ವಿವರಿಸಿದರು.
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ನಿರಂತರ ವಿದ್ಯುತ್ ಯೋಜನೆ, ತಲಾ ಇಬ್ಬರು ರೈತರಿಗೆ ಟ್ರಾನ್ಸ್‌ಫಾರಂ ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ವೋಲ್ಟೇಜ್ ಸಮಸ್ಯೆ ಬಗೆಹರಿದು ರೈತರು ಉತ್ತಮ ನೀರಾವರಿ ಬೆಳೆ ಬೆಳೆಯುತ್ತಿದ್ದಾರೆ. ಶಿಂಷಾನದಿ ಹಾಗು ಶ್ರೀರಂಗ ನದಿಯಿಂದ ರಾಮನಗರ ಹಾಗೂ ಕನಕಪುರ ತಾಲೂಕಿನ ಎಲ್ಲಾ ಕೆರೆಗಳಿಗೆ ಶೀರ್ಘದಲ್ಲಿಯೇ ನೀರು ತುಂಬಿಸುವುದು, ತಾಲೂಕು ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಜನರ ಬಳಿ ಹೋಗಿ ಸಾಧನೆಗಳನ್ನು ತಿಳಿಸುವಂತೆ ಕರೆ ನೀಡಿದರು.
ಸಂಸದ ಡಿ.ಕೆ.ಸುರೇಶ್, ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಸಮಾರಂಭದಲ್ಲಿ ಹಿರಿಯ ಮುಖಂಡ ಸೂರನಹಳ್ಳಿ ಜಯರಾಮ್, ನಗರಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಶಂಕರ್, ಮಾಜಿ ಅಧ್ಯಕ್ಷ ಎಂ.ಡಿ.ವಿಜಯದೇವ್, ನಗರಸಭಾಧ್ಯಕ್ಷ ಕೆ.ಎನ್.ದಿಲೀಪ್, ಮಾಜಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ವಕೀಲ ರಾಮಚಂದ್ರು, ಉಪಾಧ್ಯಕ್ಷ ಜಗನ್ನಾಥ್, ತಾ.ಪಂ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಗೀತಾ ಈಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: