ಮೈಸೂರು

ಮಳೆಯ ನಡುವೆಯೇ ಕಲಾಸುಧೆ ಹರಿಸಿದ ಕಲಾವಿದರು

ಮೈಸೂರು,ಸೆ.27:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಳೆಯ ನಡುವೆಯೇ ನಡೆಯುತ್ತಿದೆ.

ಮಂಗಳವಾರ ಅರಮನೆಯ ಮುಂಭಾಗದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಲಾಗದೇ ಅರಮನೆ ದ್ವಾರದ ಬಳಿ ನಿರ್ಮಿಸಿದ ಪುಟ್ಟ ವೇದಿಕೆಯಲ್ಲಿ ನಡೆಸಲಾಯಿತು. ಛಾವಣಿ ನಿರ್ಮಿಸಿದ್ದರಿಂದ ಕಾರ್ಯಕ್ರಮ ಮಳೆಯ ನಡುವೆಯೂ ಸುಗಮವಾಗಿ ಸಾಗಿತು. ಗಾಯಕ ವೈ.ಕೆ.ಮುದ್ದುಕೃಷ್ಣ ಪ್ರಸ್ತುತಪಡಿಸಿದ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರುವ ಎಂಬ ಗೀತೆಗೆ ಕನ್ನಡಾಭಿಮಾನಿಗಳು ಮನಸೋತರು. ಮುದ್ದುಕೃಷ್ಣ ಮತ್ತವರ ತಂಡದಿಂದ ಮೂಡಿಬಂದ ಗೀತೆಗಳು ಪ್ರೇಕ್ಷಕರ ಮನಗೆದ್ದವು.

ವಿದ್ವಾನ್ ಟಿ.ಎಂ ಕೃಷ್ಣ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದ್ದು, ನವದೆಹಲಿಯ ದೇವಯಾನಿ ಭರತನಾಟ್ಯವನ್ನು ಪ್ರದರ್ಶಿಸಿದರು. ಮಳೆಯ ನಡುವೆಯೂ ಕಲಾರಸಿಕರು ಕಲಾಸುಧೆಯನ್ನು ಸವಿಯುತ್ತಿರುವುದು ಕಂಡು ಬಂತು.

ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಮಳೆಯಿಂದ ಪ್ರೇಕ್ಷಕರ ಕೊರತೆ ಕಂಡು ಬಂತು.

(ಎಸ್.ಎಚ್)

Leave a Reply

comments

Related Articles

error: