
ಮೈಸೂರು
ಮೈಸೂರಿನಲ್ಲಿ ಮತ್ತೆ ಮಳೆ : ಜಲಾವೃತಗೊಂಡ ಅಮೃತಾನಂದಮಯಿ ಕಾಲೇಜು
ಮೈಸೂರು,ಸೆ.27:- ಮೈಸೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು ನಗರದ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿತ್ತು. ಹಲವೆಡೆ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ಬೆಳಗಿನ ವೇಳೆ ಮಳೆ ಅಲ್ಪವಿರಾಮ ಪಡೆದ ಮಳೆ ಮತ್ತೆ ಆರಂಭವಾಗಿದೆ.
ಮಂಗಳವಾರ ರಾತ್ರಿಯಿಂದ ಧೋ ಎಂದು ಒಂದೇ ಸಮ ಮಳೆ ಸುರಿದಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ಬೆಳಗಿನವರೆಗೂ ಮಳೆ ಸುರಿಯುತ್ತಿತ್ತು. ಆದರೆ ಬೆಳಿಗ್ಗೆ 8ಗಂಟೆಯ ಬಳಿಕ ಮಳೆ ಸ್ವಲ್ಪ ವಿರಾಮ ಪಡೆದಿತ್ತು. ಮಧ್ಯಾಹ್ನ ಮತ್ತೆ ಮಳೆ ಆರಂಭವಾಗಿದ್ದು, ಬೋಗಾದಿ ಅಮೃತಾನಂದಮಯಿ ಕಾಲೇಜು ಸಂಪೂರ್ಣ ಜಲಾವೃತವಾಗಿದೆ. ಸುರಿಯುತ್ತಿರುವ ಭಾರೀ ಮಳೆಗೆ ಮೈಸೂರಿಗರು ಕಂಗಾಲಾಗಿದ್ದಾರೆ. ಸತತ ಮಳೆಯಿಂದ ದಸರಾ ಕಾರ್ಯಕ್ರಮಗಳು, ಸಾರ್ವಜನಿಕರ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು, ಜನಜೀವನ ಅಸ್ತವ್ಯವಸ್ತವಾಗಿದೆ. (ಕೆ.ಎಸ್,ಎಸ್.ಎಚ್)