ಮೈಸೂರು

ವಾಸು ದೀಕ್ಷಿತ್, ಸಿದ್ದಾರ್ಥ್ ಮಹದೇವನ್ ಹಾಡಿಗೆ ಮನಸೋತ ಮಲ್ಲಿಗೆ ನಗರಿ ಜನರು

ಮೈಸೂರು,ಸೆ.27-ಯುವ ದಸರಾದಲ್ಲಿ ಆರನೇ ದಿನದ ಕಾರ್ಯಕ್ರಮವನ್ನು ಮೈಸೂರಿನ ಹುಡುಗ ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ರ್ಯಾಪಿಡ್ ಸಾಂಗ್ ಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದಲ್ಲಿ ಬುಧವಾರವೂ ಮಳೆಯಿಂದಾಗಿ ಪ್ರೇಕ್ಷಕರ ಗ್ಯಾಲರಿ ಖಾಲಿ ಖಾಲಿ ಹೊಡೆಯುತ್ತಿತ್ತು. ವಾಸು ದೀಕ್ಷಿತ್ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಮಾತ್ರ ವಾಸು ದೀಕ್ಷಿತ್ ನ ರ್ಯಾಪಿಡ್ ಸಾಂಗ್ ಗಳ ಗುಂಗಲ್ಲಿ ತೇಲಿದರು.

ರೆಡ್ ಬುಲ್ ಟೂರ್ ಬಸ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದರಿಂದ ಆಕರ್ಷಕ ಬಸ್ ವೇದಿಕೆ ಮೇಲೆ ವಾಸು ದೀಕ್ಷಿತ್ ನೇತೃತ್ವದ ಸ್ವರಾತ್ಮ ತಂಡ ವಿಶಿಷ್ಟವಾಗಿ ಗಾಯನ ಪ್ರಸ್ತುತ ಪಡಿಸಿದರು. ಸುಣೋರೆ ಸುಣೋರೆ ಸಾರೇ, ಅಸ್ತೆ ರಹೇಂಗೆ ಮಸ್ತ್ ರಹೇಂಗೆ, ನನಗೆ ನಾನೇ ದಾರಿ, ಈ ಭೂಮಿ ಸ್ವರ್ಗ ಆಗುತ್ತಿದೆ ನೋಡು, ಹೋರೆ ಮನ್ವಾ ಹೀಗೆ ಅನೇಕ ಗೀತೆಗಳನ್ನು ಹಾಡಿ ಪ್ರೇಕ್ಷಕರ ಜನರ ಮನ ಗೆದ್ದರಲ್ಲದೆ, ಜನರ ಮಧ್ಯೆ ತೆರಳಿ ಅವರೊಂದಿಗೆ ಕುಣಿದು, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಓ ಮೈ ಸ್ವೀಟ್ ಲೇಡಿ, ಓ ಮೈ ಸ್ವೀಟ್ ಮದರ್ ಎಂದು ಅವರ ತಾಯಿಯನ್ನು ತೋರಿಸಿ ಚಿಕ್ಕವರಾಗಿದ್ದಾಗ ಒಡೆದು ಒಡೆದು ಸಂಗೀತ ಹೇಳಿಕೊಡುತ್ತಿದ್ದರು. ಆದರೆ ನಾವು ಶಾಸ್ತ್ರೀಯ ಸಂಗೀತ ಕಲಿಯಲಿಲ್ಲ ಎಂದರು.

ಸಿದ್ದಾರ್ಥ್ ಮಹದೇವನ್ ಸಂಗೀತದ ಮೋಡಿಗೆ ತಲೆಬಾಗಿದ ಪ್ರೇಕ್ಷಕರು: ಶಂಕರ್ ಮಹದೇವನ್ ಅವರ ಪುತ್ರ ಸಿದ್ದಾರ್ಥ್ ಮಹದೇವನ್ ಬಾಗ್ ಮಿಕಾ ಬಾಗ್ ಚಿತ್ರದ ಜಿಂದಾ ಹೇ ತೋ, ದಿಲ್ ದಡಕ್ನೈ ದೋ ಚಿತ್ರದ ಲಂಡನ್ ಲಂಡನ್, ಅಚ್ಚಾ ಚಲ್ತಾಹೂ, ದೂಪ್ ಸೇ ನಿಕಲ್ ಕೇ, ಗೆಲುವೇ ಗೆಲುವೇ ನಮ್ಮದು ಸೇರಿದಂತೆ ಅನೇಕ ಪ್ರಸಿದ್ಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಎಲ್ಲರನ್ನು ತಮ್ಮ ಸಂಗೀತದ ಮೋಡಿಗೆ ತಲೆಬಾಗುವಂತೆ ಮಾಡಿದರು. (ವರದಿ-ಆರ್.ವಿ, ಎಂ.ಎನ್)

 

 

 

Leave a Reply

comments

Related Articles

error: