ಮೈಸೂರು

ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ನಾದ ನೃತ್ಯ ವೈಭವ

ಮೈಸೂರು,ಸೆ.28:-  ದಸರಾ‌ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮಂತ್ರ ಮುಗ್ಧಗೊಳಿಸುತ್ತಿದೆ.

ಅರಮನೆಯ ಮುಖ್ಯ ವೇದಿಕೆಯಲ್ಲಿ ಪ್ರಖ್ಯಾತ ಭರತ ನಾಟ್ಯ ಗುರು ಡಾ.ವಸುಂಧರಾ ದೊರೆಸ್ವಾಮಿ ಅವರು ಪ್ರಸ್ತುತ ಪಡಿಸಿದ ವಿದ್ಯುನ್ಮದನಿಕಾ ನೃತ್ಯ ಕಾರ್ಯಕ್ರಮ ಜನರನ್ನು ಮೋಡಿ ಮಾಡಿತು. ಅದೇ ವೇದಿಕೆಯಲ್ಲಿ ವಿಶ್ವದೆಲ್ಲೆಡೆ ಘಜಲ್ ಗಾಯನದ ಮೂಲಕ ನಾದ ಲಹರಿ ಹರಿಸುತ್ತಿರುವ ‌ ಗಾಯಕರಾದ ಉಸ್ತಾದ್ ತಲತ್ ಅಜೀಜ್ ಅವರು ಹಾರ್ಮೊನಿಯಮ್ ಜೊತೆಯಾಗಿ ಘಜಲ್ ಗಳನ್ನು ಹರಿಸಿದರು. ಇದೇ ಸಂದರ್ಭ ಮಾತನಾಡಿದ ತಲತ್‌ ಅಜಿಜ್ ಅವರು ಮೈಸೂರಿಗೆ ಮೂರನೇ ಬಾರಿಗೆ ಬಂದಿದ್ದೇನೆ, ಬಹಳ ಆನಂದ‌ವಾಗುತ್ತದೆ. ಮೈಸೂರು ಸಂಗೀತಕ್ಕೆ ನೀಡುವ ಮನ್ನಣೆ ಅಮೋಘವಾದದ್ದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: