ದೇಶಪ್ರಮುಖ ಸುದ್ದಿವಿದೇಶ

ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆ : ಬಾಂಗ್ಲಾದೇಶಕ್ಕೆ ಎಲ್ಲ ರೀತಿಯ ನೆರವು ನೀಡುತ್ತೇವೆ ಎಂದ ಭಾರತ

ಢಾಕ, ಸೆ.28: ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆ ವಿಷಯದಲ್ಲಿ ಭಾರತವು ಬಾಂಗ್ಲಾದೇಶಕ್ಕೆ ಎಲ್ಲ ರೀತಿಯ ರಾಜತಾಂತ್ರಿಕ ಹಾಗೂ ಮಾನವೀಯ ನೆರವು ನೀಡಲಿದೆ ಎಂದು ಬಾಂಗ್ಲಾದೇಶಕ್ಕೆ ಭಾರತದ ಹೈಕಮಿಷನರ್ ಆಗಿರುವ ಹರ್ಷವರ್ಧನ್ ಶ್ರಿಂಗ್ಲ ಅವರು ಹೇಳಿದ್ದಾರೆ ಎಂದು ಬಾಂಗ್ಲಾದೇಶದ ಪ್ರಮುಖ ದೈನಿಕ ಡೈಲಿ ಸ್ಟಾರ್ ವರದಿ ಮಾಡಿದೆ.

ಢಾಕಾದಲ್ಲಿ ನಡೆದ ‘ಡಯಾಬಿಟಿಕ್ ಅಸೊಸಿಯೇಷನ್ ಆಫ್ ಬಾಂಗ್ಲಾದೇಶ್’ ಮತ್ತು ‘ಡಯಾಬಿಟಿಸ್ ಅವೇರ್ನೆ ಸ್ & ಯು ಆಫ್ ಕೋಲ್ಕತಾ’ ಸಂಸ್ಥೆಗಳ ಸಹಯೋಗದಲ್ಲಿ ಶೈಕ್ಷಣಿಕ ತರಬೇತಿ ನೀಡುವ ಒಪ್ಪಂದವೊಂದರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಯಭಾರಿ ಶ್ರಿಂಗ್ಲ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಭಾರತವು ಬಾಂಗ್ಲಾದೇಶಕ್ಕೆ ಅಗತ್ಯವಿರುವ ಎಲ್ಲ ನೆರವನ್ನೂ ನೀಡಲಿದೆ. ಸುಮಾರು 4 ಲಕ್ಷ ರೊಹಿಂಗ್ಯಾ ನಿರಾಶ್ರಿತರನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಬಾಂಗ್ಲಾದೇಶದ ಕಾಕ್ಸ್ ಬಜಾ಼ರಿನಲ್ಲಿ ಬಂದು ನೆಲೆಸಿರುವ ರೊಹಿಂಗ್ಯಾ ನಿರಾಶ್ರಿತರಿಗೆ ಭಾರತವು ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಎರಡೂ ದೇಶಗಳ ನಡುವೆ ಪ್ರಸ್ತುತ ಅತ್ಯುತ್ತಮ ಸಂಬಂಧವಿದ್ದು ಇದು ದ್ವಿಪಕ್ಷೀಯ ಸಂಬಂಧದ ‘ಸುವರ್ಣ ಅಧ್ಯಾಯ’ ಎನ್ನಬಹುದು ಎಂದು ಹೇಳಿದ್ದಾರೆ.

ಬದಲಾಯ್ತೆ ಮೋದಿ ನಿಲುವು?

ಇತ್ತೀಚೆಗೆ ಮ್ಯಾನ್ಮಾರ್ಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು, ಅಲ್ಲಿನ ಸರ್ಕಾರದ ಮುಖ್ಯ ಸಲಹೆಗಾರ್ತಿ ಆನ್‍ ಸಾನ್‍ ಸೂ ಕಿ ಅವರನ್ನು ಭೇಟಿ ಮಾಡಿದ ವೇಳೆ ರೊಹಿಂಗ್ಯ ಬಿಕ್ಕಟ್ಟಿನ ವಿಷಯದಲ್ಲಿ ಭಾರತವು ಮ್ಯಾನ್ಮಾರ್ ಜೊತೆ ನಿಲ್ಲಲಿದೆ ಎಂದಿದ್ದರು. ಆದರೆ ಇದೀಗ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲ ಅವರು, ಭಾರತವು ಬಾಂಗ್ಲಾದ ನೆರವಿಗೆ ನಿಲ್ಲಲಿದೆ ಎಂದ್ದು ಹೇಳಿದ್ದು, ಪರಿಸ್ಥಿತಿಗೆ ಅನುಗುನವಾಗಿ ಭಾರತ ತನ್ನ ನಿಲುವಿನಲ್ಲಿ ಬದಲಾವಣೆ ತಂದುಕೊಂಡಿದೆ.

ಬಾಂಗ್ಲಾ ಸಚಿವರಿಂದ ಮು‍ನ್ನೆಚ್ಚರಿಕೆ :

ಇದಕ್ಕೂ ಮೊದಲು ಮಾತನಾಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಎಚ್.ಮೊಹಮೂದ್ ಅಲಿ ಅವರು ಮಾತನಾಡಿ, “ಪ್ರಸ್ತುತ ರೊಹಿಂಗ್ಯಾ ಬಿಕ್ಕಟ್ಟು ನಿಭಾಯಿಸುವುದು ಕಷ್ಟಕರವಾಗಿದೆ. ನಿರಾಶ್ರಿತರನ್ನು ಹೆಚ್ಚು ದಿನ ಇರಿಸಿಕೊಂಡಷ್ಟೂ ಬಾಂಗ್ಲಾದೇಶಕ್ಕೆ ಅಪಾಯ ತಪ್ಪಿದ್ದಲ್ಲ” ಎಂದು ಹೇಳಿದರು.

ರೊಹಿಂಗ್ಯಾ ಬಿಕ್ಕಟ್ಟಿನಲ್ಲಿ ಬಾಂಗ್ಲಾದೇಶದ ಪರಿಸ್ಥಿತಿಯೇ ಭಾರತದ್ದೂ ಆಗಿದ್ದು, ಎರಡೂ ದೇಶದ ಗಡಿಗಳಲ್ಲಿರುವ ನಿರಾಶ್ರಿತರಿಗೆ ಮಾನವೀಯ ನೆರವು ನೀಡುವುದರ ಜೊತೆಗೆ ಮ್ಯಾನ್ಮಾರ್ ಸರ್ಕಾರದ ಭಾರತ ಸರ್ಕಾರವು ಒತ್ತಡ ಹೇರಬೇಕಾದ ಅಗತ್ಯವಿದೆ. ಮತ್ತು ದಕ್ಷಿಣ ಏಷ್ಯಾದಲ್ಲಿ ಅಂತಾರಾಷ್ಟ್ರೀಯ ಬಿಕ್ಕಟ್ಟು ಉಲ್ಬಣವಾಗುವುದನ್ನು ತಡೆಯಬೇಕಿದೆ ಎಂದು ರಾಜತಾಂತ್ರಿಕ ವಲಯ ಅಭಿಪ್ರಾಪಟ್ಟಿದೆ.

(ಎನ್.ಬಿ)

Leave a Reply

comments

Related Articles

error: