ಮೈಸೂರು

ಸೋಮಣ್ಣನವರಿಗೆ ಮರಳಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಮನವಿ

ಹೆಗ್ಗಡದೇವನಕೋಟೆಯ ಸೋಮಣ್ಣನವರನ್ನು 2016ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಮಾಜಸೇವೆ ವಿಭಾಗದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಮಾರನೇ ದಿನ ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮಣ್ಣನವರು ಆಯ್ಕೆಯಾಗಿಲ್ಲ. ಕಣ್ತಪ್ಪಿನಿಂದ ಹೀಗಾಗಿದೆ ಎಂದು ಹೇಳಿದ್ದರು. ಅವರಿಗೆ ಮರಳಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕ್ಷೀರ ಸಾಗರ ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷೀರ ಸಾಗರ ಅವರು, ಆದಿವಾಸಿ ಜೇನುಕುರುಬ ಪಂಗಡಕ್ಕೆ ಸೇರಿದ ಸೋಮಣ್ಣನವರು “ಬುಡಕಟ್ಟು ಕೃಷಿಕರ ಸಂಘಟನೆ” ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಇವರಿಗೆ ನ್ಯಾಯಯುತವಾಗಿ ಕೊಟ್ಟಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ಮರಳಿ ಕೊಡಬೇಕೆಂದು ಮನವಿ ಸಲ್ಲಿಸಿದರು. ಸರ್ಕಾರವು ಈ ಮನವಿಯನ್ನು ಪುರಸ್ಕರಿಸದಿದ್ದರೆ ಹಂಪಿ ವಿವಿ ಗೆಳೆಯರು, ಮೈಸೂರಿನ ಗೆಳೆಯರು ಹಾಗೂ ಆದಿವಾಸಿ ಗೆಳೆಯರು ಸೇರಿಕೊಂಡು ಸೋಮಣ್ಣನವರಿಗೆ ಘನತೆಯ ಪರ್ಯಾಯ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜನಾಂಗದ ಜೆ.ಪಿ. ನಾಗರಾಜು, ಸೋಮಣ್ಣ, ಪ್ರಸಾದ್, ಕರಿಯಪ್ಪ ಹಾಜರಿದ್ದರು.

Leave a Reply

comments

Related Articles

error: