ಕರ್ನಾಟಕ

ನವರಾತ್ರಿ ಹಬ್ಬದ ಪ್ರಯುಕ್ತ ಅರಿಶಿನ ಕುಂಕುಮ ನೀಡಿದ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು

ರಾಜ್ಯ(ಮಡಿಕೇರಿ),ಸೆ.28:-ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಅರಿಸಿನ ಕುಂಕುಮ ನೀಡಲಾಯಿತು.

ಸೋಮವಾರಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಪಕ್ಷದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶುಭದಾಮಿನಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಶೀಲಾ ಡಿಸೋಜ, ಉಪಾಧ್ಯಕ್ಷರುಗಳಾದ ಜಯ ಪ್ರಕಾಶ್, ರಾಜಮ್ಮ ರುದ್ರಯ್ಯ, ಪದಾಧಿಕಾರಿಗಳಾದ ಲೀಲಾದಾಸ್, ಸೌಲಭ್ಯಲಕ್ಷ್ಮಿ, ಮಂಜುಳಾ, ಮೀನಾ ಕುಮಾರಿ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: