ಮೈಸೂರು

ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ : ಇಬ್ಬರು ಯುವತಿಯರ ರಕ್ಷಣೆ; ಮೂವರ ಬಂಧನ

ಮೈಸೂರಿನ ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಹಿಂಭಾಗ ಲಕ್ಷ್ಮೀಕಾಂತ ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮೈಸೂರಿನ ಜಯಲಕ್ಷ್ಮೀಪುರಂನ ನಾಲ್ಕನೇ ಮೇನ್ ನಂ.8ರನಿವಾಸಿ ಮಹೇಶ್ ಅಲಿಯಾಸ್ ನಾಗೇಗೌಡ(34), ತಿ.ನರಸೀಪುರ ತಾಲೂಕಿನ ಬನ್ನೂರು ರಸ್ತೆಯ ಕುಂಟನಹಳ್ಳಿಯ ರಾಕೇಶ್ ಅಲಿಯಾಸ್ ಚೆಲುವೇ ಗೌಡ(24), ಮೈಸೂರಿನ ಕುಂಬಾರಕೊಪ್ಪಲು 13ನೇ ಮೇನ್, 2ನೇ ಕ್ರಾಸ್ ನ ನಂ.170ರ ನಿವಾಸಿ ಅಣ್ಣಯ್ಯಪ್ಪ ಅಲಿಯಾಸ್ ರಾಜಣ್ಣ ಎಂದು ಗುರುತಿಸಲಾಗಿದೆ. ಬಂಧಿತರಿಂದ ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 3,100ರೂಪಾಯಿ ನಗದು, ಎರಡು ದ್ವಿಚಕ್ರ ವಾಹನ, ಮೂರು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಲಕ್ಷ್ಮಿಕಾಂತ ನಗರದ ಮನೆ ನಂಬರ್ 974ರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಪೊಲೀಸರು ಈ ವೇಳೆ ವೇಶ್ಯಾವಾಟಿಕೆಗೆ ದೂಡಲ್ಪಡುತ್ತಿದ್ದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ದಾಳಿಯಲ್ಲಿ ಸಿಸಿಬಿಯ ಎಸಿಪಿ ಸಿ.ಗೋಪಾಲ್ ನೇತೃತ್ವದಲ್ಲಿ ನಡೆದಿದ್ದು, ಇನ್ಸ್ ಪೆಕ್ಟರ್ ಚಂದ್ರಕಲಾ, ಪಿಎಸ್ ಐ ಹೆಚ್.ರಮೇಶ್, ಸಿಬ್ಬಂದಿಗಳಾದ ಜೀವನ್, ರವಿ, ಮಂಜುನಾಥ್, ಮಹಿಳಾ ಸಿಬ್ಬಂದಿ ಮಂಜುಳಾ ಪಾಲ್ಗೊಂಡಿದ್ದರು.

Leave a Reply

comments

Related Articles

error: