ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ಮಡಿಕೇರಿ ಸೆ.28: -ಪ್ರಸಕ್ತ (2017-18) ಸಾಲಿನಲ್ಲಿ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಅಡಿಯಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ ಆನ್‍ಲೈನ್ ಮೂಲಕ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಮಟ್ಟದ ಕ್ರೀಡಾಪಟುಗಳಿಗೆ ಸಹಾಯಧನ, ಸಂಘ-ಸಂಸ್ಥೆಗಳಿಗೆ ಫಿಟ್‍ನೆಸ್/ಜಿಮ್ ಸಾಮಗ್ರಿಗಳನ್ನು ಖರೀದಿಸಲು ಸಹಾಯಧನ, ಯುವಜನರಿಗೆ ಜನರಲ್ ತಿಮ್ಮಯ್ಮ ರಾಷ್ಟ್ರೀಯ ಸಾಹಸ ಅಕಾಡೆಮಿ ಮುಖಾಂತರ ಸಾಹಸ ಕ್ರೀಡೆಗಳಲ್ಲಿ ತರಬೇತಿ, ಯುವಜನರಿಗೆ ರಾಷ್ಟ್ರೀಯ ವೈಮಾನಿಕ ತರಬೇತಿ ಸಂಸ್ಥೆಯ ಮುಖಾಂತರ ಪಬ್ಲಿಕ್ ಪ್ರೈವೇಟ್ ಲೈಸೆನ್ಸ್ (ಪಿ.ಪಿ.ಎಲ್.ತರಬೇತಿ) ತರಬೇತಿ, ಯುವಜನರಿಗೆ ವೃತ್ತಿಕೌಶಲ್ಯ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್

15 ರವರೆಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಕ್ರೀಡಾಪಟುಗಳು ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08272-228985 ರಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: