ಸುದ್ದಿ ಸಂಕ್ಷಿಪ್ತ

ಅಕ್ರಮ ಗಾಂಜಾ ಮಾರಾಟ : ವ್ಯಕ್ತಿಯ ಬಂಧನ

ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತಮಾರನ ಹಳ್ಳಿ ಹರಿಶ್ಚಂದ್ರ ಘಾಟ್ ರಸ್ತೆಯಲ್ಲಿರುವ ಸೇತುವೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ 1 ಕೆ.ಜಿ.450ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಕ್ಯಾತಮಾರನಹಳ್ಳಿ ಕ್ಯಾತಮಾರನ ಕೆರೆಯ ನಿವಾಸಿ ಅಸ್ಲಂ ಅಲಿಯಾಸ್ ಕಾಲು ಎಂದು ಗುರುತಿಸಲಾಗಿದೆ. ಬಂಧಿತನಿಂದ 1 ಕೆ.ಜಿ. 450ಗ್ರಾಂ ತೂಕದ ಗಾಂಜಾ ಮತ್ತು ಮಾರಾಟದಿಂದ ಸಂಗ್ರಹಿಸಿದ್ದ 3,950ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.  ಖಚಿತ ಮಾಹಿತಿಯ ಮೇರೆಗೆ  ಎಸಿಬಿಯ ಎಸಿಪಿ ಸಿ.ಗೋಪಾಲ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ

Leave a Reply

comments

Related Articles

error: