ಕರ್ನಾಟಕಪ್ರಮುಖ ಸುದ್ದಿ

ಮ್ಯಾನ್ ಹೋಲ್ ನ್ನು ಒಡೆದ ದುಷ್ಕರ್ಮಿಗಳು : ಕೃಷಿ ಜಮೀನು ಕಲುಷಿತ; ಸಾರ್ವಜನಿಕರ ಆರೋಪ

ರಾಜ್ಯ(ಮಂಡ್ಯ)ಸೆ.29:- ಮದ್ದೂರು ಪುರಸಭೆಯಲ್ಲಿ  ಇರುವ ಒಳಚರಂಡಿ ಸಂಪರ್ಕದಲ್ಲಿ ಸರ್  ಎಂ.ವಿಶ್ವೇಶ್ವರಯ್ಯ ಬಡಾವಣೆಯ ಯುಜಿಡಿ  ಮ್ಯಾನ್ ಹೋಲ್ ನ್ನು  ದುಷ್ಕರ್ಮಿಗಳು ಒಡೆದು ಹಾಕಿಪಟ್ಟಣದ ಮಧ್ಯ ಭಾಗದಲ್ಲಿ ಹರಿಯುವ  ಕೆಮ್ಮ ನಾಲೆಗೆ ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಲುಷಿತ ನೀರು ನೇರವಾಗಿ ನಾಲೆಯನ್ನು ಸೇರಿ ಕೃಷಿಕರ ಭೂಮಿಗೆ ಹೋಗುತ್ತಿದ್ದು ಅಧಿಕಾರಿಗಳು ಗಮನ ಹರಿಸಬೇಕಿದೆ. ಕೃಷಿ ಜಮೀನು ಕಲುಷಿತಗೊಳ್ಳುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: