ಪ್ರಮುಖ ಸುದ್ದಿಮೈಸೂರು

ಮಾವುತರು-ಕಾವಾಡಿಗಳಿಗೆ ಭೋಜನ ಕೂಟ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ

ಮೈಸೂರು,ಸೆ.29:- ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ  ಶುಕ್ರವಾರ ಅರಮನೆ ಅಂಗಳದಲ್ಲಿ ಮಾವುತರಿಗೆ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಏರ್ಪಡಿಸಿದ್ದರು.

ಸಂಸದೆ ಶೋಭಾ ಕರಂದ್ಲಾಜೆ  ಅವರು ಮಾವುತ, ಕಾವಾಡಿಗಳಿಗೆ ಔತಣ ಕೂಟವನ್ನು ಏರ್ಪಡಿಸಿದ್ದರು. ಶೋಭಾ ಕರಂದ್ಲಾಜೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಿಂದಲೂ ಔತಣ  ಆಯೋಜನೆ ಮಾಡುತ್ತಾ ಬಂದಿದ್ದಾರೆ.ಈ ಬಾರಿ ದಸರಾ ಯಶಸ್ವಿಯಾಗಲಿ. ಇಂದು ಸಂಜೆ 5 ಗಂಟೆಗೆ ನಾಡಿಗೆ ಒಳಿತಾಗಲಿ ಎಂದು ಚಾಮುಂಡೇಶ್ವರಿ ಬೆಟ್ಟ ಹತ್ತುತ್ತೇನೆ. ಮುಂದಿನ ದಸರಾ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ  ದಸರಾ ನಡೆಯಲಿ ಎಂದು ಬೆಟ್ಟ ಹತ್ತುತ್ತೇನೆ. ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ.ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಎಂದು ಸಂಸದೆ ಶೋಭಾ ಕರಂದ್ಲಾಜೆ  ತಿಳಿಸಿದರು. ಕಾವಾಡಿಗರಿಗೆ ಹಾಗೂ ಮಾವುತರಿಗೆ ಸಂಸದೆ ಶೋಭಾ ಕರಂದ್ಲಾಜೆ ಊಟ ಬಡಿಸಿದರು. ಈ ಸಂದರ್ಭ ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಸೇರಿದಂತೆ ಹಲವರು ಸಂಸದರ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: